ಸುದ್ದಿ ಕನ್ನಡ ವಾರ್ತೆ

ಜೋಯಿಡಾ – ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ದಾಂಡೇಲಿಯ ಸುಭಾಷ್ ನಗರದ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಆಫ್ರಿನ್ ವಾಯ್ ಸಯ್ಯದ ಅವರು ಪಡೆದು ಕೊಂಡಿದ್ದಾರೆ.
ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ್ ಶೇಖ್ ಅವರ ಧರ್ಮಪತ್ನಿಯಾದ ಇವರು ಕಳೆದ ಹಲವಾರು ವರ್ಷದಗಳಿಂದ ದಾಂಡೇಲಿ ಸುಭಾಷ್ ನಗರದ ಉರ್ದು ಶಾಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನ ಭಾರತ ಜೋಡೋ ಭವನದಲ್ಲಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಸಂಘದ ಈ ಪ್ರಶಸ್ತಿ ಪ್ರಧಾನ‌ ಮಾಡಿದೆ.

ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹಾಗೂ ಕೆ.ಪಿ.ಸಿ.ಸಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಹಾಗೂ ಇನ್ನೀತರ ಗಣ್ಯರು ಉಪಸ್ಥಿತರಿದ್ದರು.