ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನಲ್ಲಿ ಸಂಭ್ರಮ,ಸಡಗರದಿಂದ ಶ್ರೀ ಗಣೇಶ ಚತುರ್ಥಿ ಹಬ್ಬ ಸಂಪನ್ನ. ಜೋಯಿಡಾ:ತಾಲೂಕಿನ ಹದಿನಾರು ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳ ಕೆಲವು ದೊಡ್ಡ ಕುಟುಂಬಗಳು ಒಂದೇ ಕಡೆ ಹಾಗೂ ವೈಯುಕ್ತಿಕವಾಗಿ ಶ್ರೀ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂದು ದಿನ,ಎರಡು ದಿನ ಮೂರು ದಿನ, ಐದು ದಿನ,ಏಳು ದಿನ,ಒಂಬತ್ತು ದಿನ ಹನ್ನೊಂದು ದಿನ ಹೀಗೆ ಪೂಜೆ, ಮಂಗಳಾರತಿ,ಪ್ರಸಾದ ವಿತರಣೆ,ವಿಸರ್ಜನೆ ಮಾಡುವ ಈ ವರ್ಷದ ಶ್ರೀ ಗಣೇಶ ಚತುರ್ಥಿ ಹಬ್ಬವು ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು. ಶ್ರೀ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಮನೆಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜಾ ಕಾರ್ಯಕ್ರಮ,ಮಂಗಳಾರತಿ,ವಿಧ ವಿಧ ರೀತಿಯ ಪ್ರಸಾದ,ಮೋದಕ,ಚಕ್ಕುಲಿ, ಕರ್ಜಿಕಾಯಿ,ಸಿಹಿ ತಿಂಡಿಗಳ ತಯಾರಿ, ಬಗೆ ಬಗೆಯ ಹಣ್ಣುಗಳ ಬಳಕೆ,ವಿವಿಧ ವಾದ್ಯಗಳ ಸಹಾಯದಲ್ಲಿ ಕನ್ನಡ,ಮರಾಠಿ,ಕೊಂಕಣಿ ಭಾಷೆಗಳಲ್ಲಿ ಭಜನೆ, ಆರತಿ,ಕೊಂಕಣಿ,ಮರಾಠಿ ಭಾಷೆಯ ಹಾಡುಗಳ ಮೂಲಕ ಪುಗುಡಿ ನೃತ್ಯ,ಪೌರಾಣಿಕ, ನೈಸರ್ಗಿಕ ದೃಶ್ಯಗಳ,ಪರಿಸರ ಪ್ರಿಯ ಅಲಂಕೃತ ಮಂಟಪಗಳಲ್ಲಿ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಶ್ರೀ ಗಣೇಶ ಚತುರ್ಥಿ ಹಬ್ಬವು ಸಂಪನ್ನಗೊಂಡಿತು.