ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸುಪಾ ಜಲಾಶಯ ದ ಡೊಣಪ ಗ್ರಾಮದ ಹಿನ್ನಿರ ಪಕ್ಕದಲ್ಲಿ ಬಿದ್ದು ಕೊಂಡಿರುವ ಸುಮಾರು 75 ವರ್ಷ ವಯಸ್ಸಿನ ಅಜ್ಜಿಯನ್ನು ಜೋಯಿಡಾ ಪೊಲೀಸರು ರಕ್ಸಿಸಿದ ಘಟನೆ ಇಂದು ನಡೆದಿದೆ. ಪಿಎಸ್ಐ ಮಹೇಶ ಮಾಳಿ, ತಮಗೆ ಮಾಹಿತಿ ದೊರೆತ ತಕ್ಷಣ, ಹಿರಿಯ ಅಧಿಕಾರಿ ಗಳೊಂದಿಗೆ ಮಾತನಾಡಿ, ಅಗತ್ಯ ಸಿಬ್ಬಂದಿ ಗಳೊಂದಿಗೆ, ಅಗತ್ಯ ಸಾಮಗ್ರಿ ಗಳೊಂದಿಗೆ, ಡೊಣಪ ಹಿಂನ್ನೀರು ಪ್ರದೇಶಕ್ಕೆ ಬಂದು ಅಜ್ಜಿಗಾಗಿ ಹುಡುಕಾಡಿ, ಅಜ್ಜಿ ಕಂಡೊಡನೆ, ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ, ಯಾರು ಈ ಅಜ್ಜಿ . ಕಳೆದ ಎರಡು ವರ್ಷ ಗಳ ಹಿಂದೆ ಕಾರವಾರ ದಿಂದ ಬಂದಿರುವ ಈ ಅಜ್ಜಿಯ ಹೆಸರು ಕಲ್ಪನಾ ಎಂದು ಕಾರವಾರ ದಲ್ಲಿ ಗಂಡನ ಮನೆ, ಅಲ್ಲಿ ಗಂಡ, ಮಕ್ಕಳು ಯಾರೂ ಇಲ್ಲದ ಕಾರಣ ತನ್ನ ಬಾಲ್ಯದ ಊರು, ತವರು ಮನೆ ಗಂಗೋಡ ಗ್ರಾಮ ಪಂಚಾಯತ ದ ರುಂಡಾಳಿ ಗೆ ಬಂದು ತಮ್ಮ ದುರ್ಗಾ ದಾಸ್ ಮಿರಾಶಿ ಮನೆಯಲ್ಲಿ ವಾಸ ವಾಗಿದ್ದಳು, ತಮ್ಮ ಅಕ್ಕನಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಕೊಟ್ಟು ವಾಸಕ್ಕೆ ಅನುಕೂಲ ಮಾಡಿ ಕೊಟ್ಟಿದ್ದನು, ಆದರೆ ಮಾನಸಿಕ ವಾಗಿ ಸರಿ ಇಲ್ಲದ ಅಜ್ಜಿ ಕಲ್ಪನಾ, ಗಣೇಶ ನ ಹಬ್ಬದ ನಂತರ ರುಂಡಾಳಿ ಬಿಟ್ಟು ಬಂದಿದ್ದಳು , ಹಿಂನ್ನೀರ ಹತ್ತಿರಅಜ್ಜಿಯನ್ನು ನೋಡಿದ ಕುಂಬಾರ್ವಾಡ ದ ಪ್ರಸನ್ನ. ಗಾವುಡ ಮತ್ತು ದಯಾನಂದ ಅವರು ಜೋಯಿಡಾ ಪೊಲೀಸರಿಗೆ ಮಾಹಿತಿನೀಡಿದ್ದರು.

ಈ ಅಜ್ಜಿಯ ತಮ್ಮ ನು ಅವಳ ಆರೈಕೆ ಸಾಧ್ಯವಿಲ್ಲ ಎಂದು ಹೇಳಿದ ಕಾರಣ ಜೋಯಿಡಾ ದ ಪ್ರಗತಿ ನಿಲಯ ಅನಾಥಾಶ್ರಮ ದವರೊಂದಿಗೆ ಮಾತನಾಡಿ ಅವರ ಒಪ್ಪಿಗೆ ಯಂತೆ ಅಲ್ಲಿ ಸೇರಿಸುವ ಮುನ್ನ ಜೋಯಿಡಾ ದ ಆಸ್ಪತ್ರೆಗೆ ಅಜ್ಜಿಯನ್ನು ಕರೆತಂದು ಅವಳಿಗೆ ಉತ್ತಮ ಬಟ್ಟೆಗಳನ್ನು ಪಿಎಸ್ಐ ಮಹೇಶ ಮಾಳಿ ಕೊಟ್ಟಿರುತ್ತಾರೆ. ಅಜ್ಜಿಯ ರಕ್ಷಣೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಗಳಾದ, ಅಖಿಲೇಶ್, ಸುಜಾತಾ, ಸಾಂತ್ವನ ಕೇಂದ್ರದ ದುರ್ಗಾ ಗೌಡ, ಸ್ವಾತಿ, ಸುವರ್ಣ ಇತರರು ಇದ್ದರು. ಕೊನೆಗೂ ಅನಾಥಾ ಶ್ರಮ ಸೇರಿದ ಅಜ್ಜಿ