ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದ 40 ನೇಯ ವರ್ಷದ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಅವುರ್ಲಿ ಸೋಮೇಶ್ವರ ಭಜನಾ ಮಂಡಳಿಯ ಶ್ರೀಕೃಷ್ಣ ವೇಳಿಪ,ಗಣೇಶ ವೇಳಿಪ,ಶಂಕರ ವೇಳಿಪ,ರಾಜೇಂದ್ರ ನಾಯ್ಕ,ಪ್ರವೀಣ ವೇಳಿಪ,ವೆಂಕಟ್ರಮಣ ವೇಳಿಪ,ಸೋಮಣ್ಣ ವೇಳಿಪ,ಉಮೇಶ ವೇಳಿಪ ಭಜನಾ ಸೇವೆಯಲ್ಲಿ ಭಾಗವಹಿಸಿದ್ದರು.

ಯರಮುಖ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ ಭಟ್ಟ ಹಾಗೂ ಪದಾಧಿಕಾರಿಗಳು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಊರಿನ ಉತ್ಸಾಹಿ ಕಾರ್ಯಕರ್ತರು ಶ್ರೀ ಲೋಕಮಾನ್ಯ ಬಾಲಗಂಗಾಧರ ತಿಲಕರು ಹಾಕಿ ಕೊಟ್ಟ ಆದರ್ಶವನ್ನು ಅನುಸರಿಸಿ ಶ್ರೀ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಆರಂಭಿಸಿ ಈ ವರ್ಷ 40 ವರ್ಷಗಳಾದವು. ಶ್ರೀ ಗಜಾನನೋತ್ಸವ ಸಮಿತಿಯವರು ಭರತ ನಾಟ್ಯ, ಸಾಂಸ್ಕ್ರತಿಕ ಕಾರ್ಯಕ್ರಮ, ಹರಿಕೀರ್ತನೆ,ತಿಂಡಿಗಳ ತಯಾರಿ ಸ್ಪರ್ಧೆ,ಭಜನಾ ಸ್ಪರ್ಧೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡುವುದೇ ಇಲ್ಲಿನ ವಿಶೇಷವಾಗಿದೆ.