ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ರಾಜ್ಯದ ಪ್ರತಿಷ್ಠಿತ ಕಾಳಿ ನದಿಯ ಒಡಲು ತುಂಬುತ್ತಿದ್ದಂತೆ ಬಜಾರ್ ಕುಣಂಗ ಗ್ರಾಮ ಪಂಚಾಯತ ಜನರ ನಿದ್ದೆ ಕೆಟ್ಟಿದೆ, ಸುಪಾ ಜಲಾಶಯ ದ ನೀರಿನ ಮಟ್ಟ 558 ಮೀಟರ್ ಆಗುತ್ತಲೇ ಬಜಾರಕುಣಂಗ ಗ್ರಾಮ ಪಂಚಾಯತ ದ ಹಳ್ಳಿಗಳು ನೀರಿನಿಂದ ಸುತ್ತುವರೆದು ನಡುಗಡ್ಡೆ ಗಳಾಗುತ್ತವೆ. ಇದು ಸರಕಾರದ ಜಲಾಶಯದ ಅಂದಿನ ಸರ್ವೆ ಸರಿಯಾಗಿ ಆಗಿಲ್ಲ ಎನ್ನುವುದನ್ನು ತೋರಿಸಿ ಕೊಡುತ್ತದೆ. ಈಗಲಾದರೂ ಜನಪ್ರತಿನಿದಿಗಳು, ಗ್ರಾಮ ಪಂಚಾಯತ ಜಿಲ್ಲಾ ಆಡಳಿತ ದವರು ಬದಲಿ ಮಾರ್ಗ, ಮಾಡಿಕೊಡುವ ಬಗ್ಗೆ ತ್ವರಿತವಾಗಿ ಕ್ರಮ ಕೈಕೊಳ್ಳ ಬೇಕಾಗಿದೆ.

ಜಲಾಶಯ ತುಂಬಿದಾಗ, ಮಾತ್ರ ಜನತೆ ಬೊಬ್ಬೆ ಹೊಡೆದ ಮೇಲೆ, ದೋಣಿ ವ್ಯವಸ್ಥೆ ಮಾಡುವ, ಆಡಳಿತಕ್ಕೆ, ಜನತೆಗೆ ಶಾಶ್ವತ ಪರಿಹಾರ ಮಾಡಬೇಕು ಎಂಬ ಕಲ್ಪನೆ ಇರಬೇಕು. ಯಾಕೆಂದರೆ ಪ್ರತಿ ಮಳೆಗಾಲಕ್ಕೂ, ಬಜಾರ ಕುಣ0ಗ ಜನತೆ ಮತ್ತೆ ಮಳೆಗಾಲಕ್ಕೆ ಯಾವ ಸಂಕಷ್ಟ ಕಾದಿದೆಯೋ ಎಂದು ಅಲವತ್ತು ಕೊಳ್ಳುತ್ತಾರೆ, ಮಳೆಗಾಲ ಮೂರು ತಿಂಗಳು ಎಲ್ಲಾ ಸಂಪರ್ಕ ಕಡಿತಗೊಂಡು, ಆರೋಗ್ಯ ಕೆಟ್ಟರೂ ಮನೆಯಿಂದ ಹೊರಬರಲಾರದೇ ಒದ್ದಾಡುತ್ತಾರೆ ಈ ಸಮಸ್ಯೆ ಡಿಗ್ಗಿ ಯಲ್ಲಿ ಕಳೆದ ವರ್ಷ ಜಿಲ್ಲಾಧಿಕಾರಿ ಗಳು ನಡೆಸಿದ ಸಭೆಯಲ್ಲಿ ಪ್ರಸ್ತಾಪಕ್ಕೆ ಬಂದರೂ ಕಾರ್ಯಾಚರಣೆ ಮಾತ್ರ ಆಗಿಲ್ಲ. ಸುಪಾ ಜಲಾಶಯ ಈಗ 560 ಮೀಟರ್ ತುಂಬಿದೆ ಇನ್ನು ನಾಲ್ಕು ಮೀಟರ್ ಬಾಕಿ ಇದೆ.

ಈ ಹಂತದಲ್ಲಿ ಸರಕಾರ ಅಥವಾ ಗ್ರಾಮ ಪಂಚಾಯತ ಸರ್ವೆ ನಡೆಸಿ ನೀರು ತುಂಬುವ ವ್ಯಾಪ್ತಿಯನ್ನು ಗುರುತಿಸಿ, ಯಾವುದೇ ಹಂತದಲ್ಲಿ ಸುಪಾ ಜಲಾಶಯಕ್ಕೆ ನೀರು ತುಂಬಿ ಬಂದರೂ ತಮ್ಮ ಗ್ರಾಮ ಪಂಚಾಯತ ದ ಹಳ್ಳಿ ಗಳಿಗೆ ತೊಂದರೆ ಆಗದಂತೆ ಸರ್ವ ಋತು ರಸ್ತೆ ಯನ್ನು ಕೆ ಪಿ ಸಿ ಯಿಂದ ಮಾಡಿಸಿಕೊಳ್ಳಬೇಕು ಈ ಕುರಿತು ಸಂಸದರನ್ನು ಕಂಡು ಕೇಂದ್ರ ಸರಕಾರಕ್ಕೂ ಮನವರಿಕೆ ಮಾಡಿಕೊಂಡು ರಸ್ತೆ ನಿರ್ಮಿಸಿ ಸಮಸ್ಯೆ ಬಗೆಹರಿಸಿ ಕೊಳ್ಳಬೇಕಾಗಿದೆ, ಕಳೆದ ವಾರದಿಂದ ಕರಂಜೆ. ದುದ್ಮಾಳ ಇನ್ನಿತರ ಹಳ್ಳಿಗಳಲ್ಲಿ ಏನಾಗುತ್ತಿದೆ ಎಂದು ತಿಳಿದು ಬರುತ್ತಿಲ್ಲ, ತಾತ್ಕಾಲಿಕ ದೋಣಿ ವ್ಯವಸ್ಥೆ ಕೆ ಪಿ ಸಿ ಮಾಡಿದೆ, ಆದರೆ ಇದು ಅಪಾಯಕಾರಿ, ಆದ್ದರಿಂದ ಸರ್ವ ಋತು ರಸ್ತೆ ನಿರ್ಮಾಣ ವಾಗದೆ ಇದ್ದಲ್ಲಿ ಶಾಲೆಗೆ ಹೋಗುವದು, ಆಸ್ಪತ್ರೆಗೆ ಹೋಗುವುದು, ದೈನಂದಿನ ಕೆಲಸ ಕಾರ್ಯ ಮಾಡುವುದು ಹೇಗೆ, ನಮಗೆ ತಾಲೂಕಿನ