ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಜಗಲಬೇಟ ಗ್ರಾಮ ಪಂಚಾಯತದಲ್ಲಿ ಪರಿಶಿಷ್ಟ ಪಂಗಡದ ಜನರಿಗೆ ನೀಡುವ ಪೌಷ್ಠಿಕ ಆಹಾರದ ಕಿಟ್ ನ್ನು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಜೋಯಿಡಾ ಶಾಸಕರಾದ ಆರ್.ವಿ.ದೇಶಪಾಂಡೆಯವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಡ ಜನರಿಗೆ ನಮ್ಮ ರಾಜ್ಯ ಸರ್ಕಾರ ಉಚಿತವಾಗಿ ಪಡಿತರ ಅಕ್ಕಿ ನೀಡುತ್ತಿದೆ,ಪರಿಶಿಷ್ಟ ಪಂಗಡದ ಜನರು ಪೌಷ್ಟಿಕತೆಯ ಕೊರತೆ ಎದುರಿಸಬಾರದು ಎಂಬ ದೃಷ್ಟಿಯಿಂದ ಮೊಟ್ಟೆ,ಅಡುಗೆ ಎಣ್ಣೆ, ಬೆಳೆ ಕಾಳು,ಬೆಲ್ಲ ಇನ್ನಿತರ ಆಹಾರವನ್ನು ನೀಡುತ್ತಿದ್ದೇವೆ.ಇದರ ಸದುಪಯೋಗವನ್ನು ಪರಿಶಿಷ್ಟ ಪಂಗಡದ ಜನರು ಪಡೆದುಕೊಳ್ಳಬೇಕು ಎಂದರು. ಈ ಮೊದಲು ಕೃಷಿ ಇಲಾಖೆಯಿಂದ ಅರ್ಹ ಫಲಾನುಭವಿ ರೈತರಿಗೆ ಪವರ್ ಟಿಲ್ಲರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜೋಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ, ಜಗಲಬೇಟ ಗ್ರಾಮ ಪಂಚಾಯತ ಪ್ರತಿನಿಧಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ. ಬಿ,ಕೃಷಿ ಇಲಾಖೆಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದ್ದರು.