ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹನುಮಾನಲೇನ್ ಶಾಲೆಯ ಸಹ ಶಿಕ್ಷಕಿಯಾದ ಶಕುಂತಲಾ ಕುಡ್ತರಕರರವರು ಸೇವಾ ನಿವೃತ್ತಿಯಾದರು. ಸರಕಾರಿ ಹಿರಿಯ ಪ್ರಾಥಮಿಕ ಹನುಮಾನ ಲೇನ್ ಕನ್ನಡ ಶಾಲೆಯಲ್ಲಿ ಸೇವಾ ನಿವೃತ್ತಿಯ ನಿಮಿತ್ತ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ.ಹೆಚ್.ಬಾಗವಾನರವರು ಸಭಾ ಕಾರ್ಯಕ್ರಮಕ್ಕೆ ಗಣ್ಯರನ್ನು ಸ್ವಾಗತಿಸಿದರು.

ವಿಧ್ಯಾರ್ಥಿಗಳ ಪ್ರಾರ್ಥನೆ,ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹನುಮಾನಲೇನ್ ಶಾಲೆಯ ಸಹ ಶಿಕ್ಷಕಿಯಾದ ನಾಗರತ್ನಾ ಮೊಗೇರರವರು ಗುರು ಮಾತೆ ಶಕುಂತಲಾ ಕುಡ್ತರಕರರವರ ಜೀವನದ ಕಿರು ಪರಿಚಯವನ್ನು ಮಾಡಿ,ಅವರ ಕಾರ್ಯದ ಕುರಿತಾದ ಮಾತುಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಸಿಆರ್ ಪಿಗಳು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ. ಹೆಚ್. ಬಾಗವನ್ ರವರು ಮಾತನಾಡುತ್ತಾ ಕಳೆದ 15 ವರ್ಷಗಳಿಂದ ಶಾಲೆಯ ಸಹ ಶಿಕ್ಷಕಿಯಾದ ಶಕುಂತಲಾ ಕುಡ್ತರಕರರವರು ಶಾಲೆಯ ಅದ್ಭುತ ಗುರುಮಾತೆ,ಮಕ್ಕಳ ಪಾಲಿನ ದೇವರು,ಕರ್ತವ್ಯವೇ ಪರದೈವ ಎಂದು ಕರ್ತವ್ಯ ನಿಷ್ಠ,ವೈಯುಕ್ತಿಕ ಭಾವನೆಗಳನ್ನು ಹಂಚಿಕೊಂಡಾಗ ಅವುಗಳಿಗೆ ಸಮಾಧಾನ ಹೇಳುವ ಸ್ಪಂದನಾಜೀವ, ಪ್ರತಿಯೊಂದರಲ್ಲಿ ಶಿಸ್ತನ್ನು ರೂಢಿಸಿಕೊಂಡ ಶಿಸ್ತಿನ ಸಿಪಾಯಿ, ಸಮಯ ಪ್ರಜ್ಞೆ ಹೊಂದಿರುವ ಪ್ರಜ್ಞಾಜೀವಿ,ಸೇವಾ ಕರ್ತವ್ಯದ ಪಯಣದಲ್ಲಿ ಅದ್ಭುತ ಪಯಣಿಗ,ಕಾಯಕವೇ ಕೈಲಾಸ ಎಂಬ ಬಸವ ತತ್ವ ರೂಢಿಸಿಕೊಂಡ ಕಾಯಕಜೀವಿ, ಇಂತಹ ಗುರುಮಾತೆಯ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನನಗೆ ತುಂಬಾ ನೋವಿನ ಘಳಿಗೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ರವರು ಮಾತನಾಡಿ ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ, ಕರ್ತವ್ಯನಿಷ್ಠೆಯಿಂದ ಮಾಡಬೇಕು,ನಾವು ಎಲ್ಲರಿಗೂ ಒಳ್ಳೆಯದನ್ನೇ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ. ತಮ್ಮ ಸೇವೆಯಿಂದ ಎಲ್ಲಾ ಗುರು ವೃಂದಕ್ಕೆ ಮಾದರಿಯಾದ ಶಕುಂತಲಾ ಕುಡ್ತರಕರರವರ ಸೇವಾ ನಿವೃತ್ತಿಯ ಜೀವನ ಸುಖಕರವಾಗಲಿ, ಪಾಲಕರು, ಪೋಷಕರು ಹೆಚ್ಚಿನ ಸಮಯ ಮಕ್ಕಳು ಮನೆಯ ವಾತಾವರಣದಲ್ಲೇ ಇರುವುದರಿಂದ ಅವರ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕೆಂದು ಹೇಳಿದರು.

 

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಡಿ. ಅಧ್ಯಕ್ಷ ಸಚಿಕುಮಾರ ನಾಯರ, ಉಪಾಧ್ಯಕ್ಷೆ ವಿನಂತಿ ಸೋಲಯೆಕರ,ಗ್ರಾಮ ಪಂಚಾಯತ ಸದಸ್ಯರಾದ ಪ್ರಣವ ದೇಸಾಯಿ,ವಿನೋದ ದೇಸಾಯಿ,ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಶ್ಯಾಮರಾವ್ ದೇಸಾಯಿ,ಯಶವಂತ ನಾಯ್ಕ,ಮಹಾದೇವ ಹಳದನಕರ, ಧವಳೋ ಗಣೇಶ ಸಾವರ್ಕರ್,ಅನಿಲ ರಾಠೋಡ,ಸ್ಮಿತಾ ಜಾಧವ, ಅನೀಸ್ ಫಾತಿಮಾ, ಸಿಆರ್ ಪಿ ನಾರಾಯಣ ದೇಸಾಯಿ, ಕಾನೇಕರ ಶಾಲೆಯ ಮುಖ್ಯ ಶಿಕ್ಷಕರಾದ ಸವಿತಾ ನಾಯಕ,ಕಿನ್ನರಕರ ಮೇಡಂ,ಸದಸ್ಯರು, ಪಾಲಕರು, ಪೋಷಕರು ಗುರುಮಾತೆ ಶಕುಂತಲಾ ಕುಡ್ತರಕರರವರ ಸೇವಾ ನಿವೃತ್ತಿಯ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು.

 

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರು, ಶಾಲಾ ಶಿಕ್ಷಕ ವೃಂದದವರು, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಶಿಷ್ಯಂದಿರು,ತಾಲೂಕಾ ಶಿಕ್ಷಣ ಇಲಾಖೆಯ ವತಿಯಿಂದ,ಬಿಸಿಯೂಟ ಅಡುಗೆ ತಯಾರಕರು, ಕಾನೇಕರ,ಶಿಂದೋಳಿ ಶಾಲೆಯ ಶಿಕ್ಷಕ ವೃಂದದವರು, ಶಾಲೆಗೆ ಅತ್ಯುತ್ತಮ ಸೇವೆಯನ್ನು ನೀಡಿ ಸೇವಾ ನಿವೃತ್ತಿ ಯಾದ ಶಿಕ್ಷಕಿ ಶಕುಂತಲಾ ಕುಡ್ತರಕರವರನ್ನು ಸನ್ಮಾನಿಸಿದರು. ಕೊನೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಗುರು ಮಾತೆ ಶಕುಂತಲಾ ಕುಡ್ತರಕರರವರು ತಮ್ಮ 27 ವರ್ಷಗಳ ಶಿಕ್ಷಕಿ ವೃತ್ತಿಯ ಸೇವಾವಧಿಯಲ್ಲಿ ಕುಟುಂಬದವರು,ಶಾಲಾ ಆಡಳಿತ ಮಂಡಳಿಯವರು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು,ಶಿಕ್ಷಕ ವೃಂದದವರು,ಪಾಲಕರು, ಪೋಷಕರು ವಿಧ್ಯಾರ್ಥಿಗಳು ನೀಡಿದ ಸಹಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಭಾವುಕರಾದರು.

 

ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ ನಿರೂಪಿಸಿದರು,ಸಹ ಶಿಕ್ಷಕಿಯಾದ ನಾಗರತ್ನಾ ಮೊಗೇರ ವಂದಿಸಿದರು.ಅತಿಥಿ ಶಿಕ್ಷಕಿ ಸಂಜನಾ ಮಿರಾಶಿ ಸಹಕಾರ ನೀಡಿದರು. ಶಿಕ್ಷಕಿ ಶಕುಂತಲಾ ಕುಡ್ತರ ಕರರವರು ತಮ್ಮ ಸೇವಾ ನಿವೃತ್ತಿ ಜೀವನದ ಹನುಮಾನ ಲೇನ್ ಶಾಲೆಗೆ ಕಪಾಟನ್ನು(ಟ್ರೇಜೆರಿ) ದೇಣಿಗೆಯಾಗಿ ನೀಡಿದರು. ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಣೆ ಮಾಡಿದರು.