ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ಅನಮೋಡ ತನಿಖಾ ಠಾಣೆ ಯಲ್ಲಿ ಅಕ್ರಮ ವಾಗಿ ಸಾಗಿಸುತ್ತಿದ್ದ ಗೋವಾ ಸಾರಾಯಿ ಯನ್ನು ತನಿಖಾ ಠಾಣೆ ಅಧಿಕಾರಿಗಳು ವಶ ಪಡಿಸಿ ಕೊಂಡಿದ್ದಾರೆ,
ಅಶೋಕ ಲೈಲ್ಯಾoಡ ಲಾರಿ ನಂಬರ ಬಿ ಜೆ 03 ಬಿ ವೈ 4559 ಇದರಲ್ಲಿ 180 ಎಂ ಎಲ್ ನ ವಿವಿಧ ಜಾತಿಯ 925 ಬಾಟಲ್ ಗಳಲ್ಲಿ 166.500 ಲೀಟರ್ ಸಾರಾಯಿ ಯನ್ನು ವಶ ಪಡಿಸಿ ಕೊಂಡಿದ್ದಾರೆ. ಗುಜರಾತ್ ರಾಜ್ಯದ ರಾಜಕೋಟ ನಿವಾಸಿ ಧರ್ಪಣ ಬಿನ್ ಯೋಗೇಶ ಬಾಯ್ ನನ್ನು ಲಾರಿ ಸಮೇತ ವಶ ಪಡಿಸಿ ಕೊಂಡು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ
