ಸುದ್ದಿ ಕನ್ನಡ ವಾರ್ತೆ

ಕಲೆ ಯಾರಿಗೆ ಒಲಿಯುತ್ತದೆ ಎಂದು ಹೇಳುವುದು ಕಷ್ಟ. ಆದರೆ ಕಲಿಯಬೇಕೆಂಬ ಮನಸಿದ್ದರೆ ಕಲಾವಿದರಾಗಲು ಸಾಧ್ಯ ಎಂಬುದನ್ನು ಜೊಯಿಡಾ ದ ಶ್ರೀಮತಿ ಸೀತಾ ಎಸ್ ದಾನಗೇರಿ ತೋರಿಸಿಕೊಟ್ಟಿದ್ದಾರೆ.

ಅತ್ಯಂತ ಹಿಂದುಳಿದ ತಾಲೂಕು ಜೊಯಿಡಾ ಎಂಬ ಹಣೆಪಟ್ಟಿ ಹೊತ್ತರೂ ಕಲಾರಂಗ ಸಂಗೀತ ಕ್ಷೇತ್ರದಲ್ಲಿ ಜೊಯಿಡಾತಾಲೂಕು ಶ್ರೀಮಂತವಾಗಿದೆ.

ಹಿಂದುಸ್ತಾನಿ ಸಂಗೀತ ಸುಗಮ .ಸಂಗೀತ ,ಯಕ್ಷಗಾನ ಪರಂಪರಾಗತ ಸಂಗೀತ , ಭಜನೆ ಕೊಳಲು ವಾದನ ಹೀಗೆ ವಿವಿಧ ರಂಗದಲ್ಲಿ ಇಲ್ಲಿನ ಸಂಗೀತಗಾರರು ವಿದೇಶದ ವರೆಗೂ ಹೋಗಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.
ಅದೇ ರೀತಿ , ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಿರುವ ಕಲಾವಿದೆ ಸೀತಾ ದಾನಗೇರಿ ಅವರು,
ಶೋಭಾನೆ ಹಾಡು , ಸುಗಮ ಸಂಗೀತ , ಜನಪದ ಸಂಗೀತ , ಯಕ್ಷಗಾನ ಅರ್ಥ ದಾರಿಕೆ ಭಜನೆಗಳ ಜೊತೆಗೆ ಹರಿಕೀರ್ತನೆ ಕೂಡ ಮಾಡುವ ಮೂಲಕ ಸಂಗೀತ ಕ್ಷೇತ್ರಕ್ಕೆ ಹೆಚ್ಚಿನ ಮೆರಗನ್ನು ನೀಡುತ್ತಿದ್ದಾರೆ.

ಅಷ್ಟೇ ಅಲ್ಲ ಹರಿಕೀರ್ತನೆ ಮಾಡುವ ತಾಲೂಕಿನ ಮೊದಲನೆ ಮಹಿಳೆ ಎಂಬ ಹೆಗ್ಗಳಿಕೆ ಅವರದು ಉತ್ತಮ ಹಾಡು ಉತ್ತಮ ಮಾತುಗಾರಿಕೆ ಅವರ ವಿಶೇಷ, ಉತ್ತಮ ನಿರೂಪಕರು ಕೂಡ ಆಗಿದ್ದಾರೆ ಹಾಗಾಗಿ ಸೀತಾ ಅವರು ಉತ್ತಮವಾಗಿ ಕಾರ್ಯಕ್ರಮ ನಿರ್ವಹಣೆ ಮಾಡುವ ಮೂಲಕ ಜನ ಮೆಚ್ಚುಗೆ ಗಳಿಸುತ್ತಿದ್ದಾರೆ. ಕಾರ್ಯಕ್ರಮ ನಿರ್ವಹಣೆಯಲ್ಲಿ ಅವರು ಮಾಡುತ್ತಿರುವ ಸಾಧನೆಗೆ ಅವರಿಗೆ ತಾಲೂಕಿನ ಅನುಶ್ರೀ ಎಂದೇ ಕರೆಯುತ್ತಾರೆ. ಇವರು ಯರಮುಖದ ಸಾರ್ವಜನಿಕ ಗಜಾನನ ಉತ್ಸವದಲ್ಲಿ ಹರಿಕೀರ್ತನೆ ಮಾಡುವ ಮೂಲಕ ಸೇರಿದ ಜನರಿಂದ ಅಪಾರ ಮೆಚ್ಚುಗೆ ಪಡೆದರು. ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಭಟ್ಟ ಮತ್ತು ಸಮಿತಿಯವರು ಇನ್ನೊಬ್ಬ ಮಹಿಳಾ ಕಲಾವಿದೆ ಸುಮಂಗಲಾ ದೇಸಾಯಿ ಅವರಿಂದ ಸೀತಾ ದಾನಗೇರಿ ಅವರನ್ನು ಗೌರವಿಸಿದ್ದಾರೆ.

ಉತ್ತಮ ಸಂಗೀತಕಾರರು , ಉತ್ತಮ ಕೀರ್ತನಾಕಾರರು , ಉತ್ತಮ ನಿರ್ವಹಣಕಾರರು ಆಗಿರುವ ಸೀತಾ ದಾನಗೇರಿಅವರು ಇವೆಲ್ಲ ವುಗಳ ಜೊತೆಗೆ ಸ್ವರ್ಣವಲ್ಲಿ ಮಠದ ಗುಂದ ಸೀಮಾ ಮಾತೃ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ ಅವರ ಕುಟುಂಬ ಕೃಷಿ ಕುಟುಂಬವಾಗಿದ್ದು ಮನೆಯವರ ಸಹಕಾರದಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ತಾಲೂಕಿನ ಹೆಮ್ಮೆಯಾಗಿದೆ.