ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಜನರ ಮತ್ತು ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಗ್ರಾಮದಿಂದ ಪಟ್ಟಣದ ವರೆಗೆ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸ್ವಚ್ಚತೆ ಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಇದು ಸರ್ಕಾರದ ಕಾರ್ಯ ಕ್ರಮ ಆಗದೇ ಎಲ್ಲಾ ಜನ ಸಾಮಾನ್ಯರ ಸ್ವಚ್ಚತಾ ಆಂದೋಲನ ಆಗಬೇಕು. ಈ ಸ್ವಚ್ಚತಾ ಆಂದೋಲನ ನಿರಂತರವಾಗಿ ನಡೆಯಬೇಕು. ಸ್ವಯಂ ಪ್ರೇರಣೆಯಿಂದ, ಸ್ವಾಭಿಮಾನದಿಂದ ಎಲ್ಲರೂ ಭಾಗವಹಿಸಬೇಕು ಎಂದು ಶಾಸಕರು ಮತ್ತು ರಾಜ್ಯ ಆಡಳಿತ ಸುಧಾರಣಾಸಮೀತಿಅಧ್ಯಕ್ಷರೂ ಆಗಿರುವ ಆರ್ ವಿ ದೇಶಪಾಂಡೆ ಹೇಳಿದರು .

ಅವರು ಶನಿವಾರ ಜೋಯಿಡಾ ದಲ್ಲಿ ಸ್ವಚ್ಛತಾ ಆಂದೋಲನ ದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು, ಕ್ಷೇತ್ರದಲ್ಲಿ ಹಳ್ಳಿಯಿಂದ ಪಟ್ಟಣದ ಒರೆಗೆ ಸ್ವಚ್ಚತೆ ಕಾರ್ಯಕ್ರಮ ಏಕಾಕಾಲದಲ್ಲಿನಡೆಯುತ್ತಿದೆ ಇದು ರಾಜ್ಯದಲ್ಲಿ ಪ್ರಥಮ ಪ್ರಯೋಗವಾಗಿದೆ. ಇದಕ್ಕೆ ಸ್ಥಳಿಯ ದಾನಿಗಳು, ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸುತ್ತಿದ್ದಾರೆ ಹಾಗಾಗಿ ಎಲ್ಲರೂ ತಮ್ಮ ತಮ್ಮ ಪರಿಸರ ಗಳನ್ನು ಸ್ವಚ್ಛ ವಾಗಿ ಇಟ್ಟು ಕೊಂಡರೆ ಆರೋಗ್ಯ ವಂತರಾಗಿ ಇರಲು ಸಾಧ್ಯ ಎಂದರು.

ನಾಳೆ 31 ರಂದು ತಾಲೂಕಿನ ಎಲ್ಲೆಡೆ ಬೆಳಿಗ್ಗೆಯಿಂದ ಸಂಜೆ ವರೆಗೆ ಸ್ವಚ್ಛತಾ ಕಾರ್ಯ ನಡೆಯಲಿದ್ದು ಎಲ್ಲರ ಸಹಕಾರ ಅಗತ್ಯ ಎಂದರು ಈ ಸಂದರ್ಭದಲ್ಲಿ ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ, ಭಾರತಿ ಎನ್ ಮತ್ತು ಸಾರ್ವಜನಿಕರು ಪಕ್ಷದ ಕಾರ್ಯ ಕರ್ತರು ಉಪಸ್ಥಿತರಿದ್ದರು.