ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯ ಡಿಗ್ಗಿ-ಬೊಂಡೇಲಿ ಗ್ರಾಮದ (ಕಟ್ಯಾರ್) ಶಕೆ 1870 ರ ಇಸವಿಯಲ್ಲಿ ಸ್ಥಾಪನೆ ಆದ ಶ್ರೀ ಸತ್ಯನಾರಾಯಣ ದೇವರ ದೇವಸ್ಥಾನದ ವರ್ಧಾಪನದಿನ ಮತ್ತು ಜಾತ್ರೋತ್ಸವ ದಿನಾಂಕ:31-03-2026 ರ ಮಂಗಳವಾರರಂದು ನಡೆಯಲಿದೆ. ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ 12:00 ರಿಂದ 1:00 ಗಂಟೆಗೆ ಶ್ರೀ ಸತ್ಯನಾರಾಯಣ ದೇವರ ಮಹಾಅಭಿಷೇಕ, ಮಹಾಪೂಜಾ ನಡೆಯುವುದು. ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.ಮಧ್ಯಾಹ್ನ 3:00 ರಿಂದ ರಾತ್ರಿ 9:00 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ.

ಸಾಯಂಕಾಲ 5:00 ರಿಂದ 8:00 ಗಂಟೆಯವರೆಗೆ ಭಜನಾ ಕಾರ್ಯಕ್ರಮ. ರಾತ್ರಿ 9:00 ಗಂಟೆಗೆ ಶ್ರೀ ದೇವರ ಫಲಾಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಲಿದೆ.ರಾತ್ರಿ 11:30 ಗಂಟೆಗೆ ದೇಣಿಗೆ ಕೂಪನ್ ಡ್ರಾ ನಡೆಯಲಿದೆ.ಭಕ್ತರ ವಿಶೇಷ ಮನರಂಜನೆಗಾಗಿ ರಾತ್ರಿ12:00 ಗಂಟೆಗೆ ಡಿಗ್ಗಿ-ಬೊಂಡೇಲಿ ತರುಣ ನಾಟ್ಯ ಮಂಡಲದ ಕಲಾವಿದರಿಂದ ಅರ್ಪಿಸುವ ಶ್ರೀ ಕೃಷ್ಣ ಸೋನು ಹಡಪಕರ ವಿರಚಿತ ಸಾಮಾಜಿಕ,ಹೃದಯಸ್ಪರ್ಶಿ, ಸಂಗೀತ ‘ಅನ್ಯಾಯಚಾ ಬದಲಾ’ ಮರಾಠಿ ನಾಟಕದ ಪ್ರದರ್ಶನ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸತ್ಯನಾರಾಯಣ ದೇವಸ್ಥಾನ ಮಿರಾಶಿ ಬಂಧುಗಳು, ಕಾರ್ಯಕಾರಿ ಸಮಿತಿ,ಊರಿನ ನಾಗರೀಕರು ಡಿಗ್ಗಿ-ಬೊಂಡೇಲಿ ವಿನಂತಿಸಿಕೊಂಡಿದ್ದಾರೆ.