ಸುದ್ದಿ ಕನ್ನಡ ವಾರ್ತೆ
ಜೋಯಿಡ ತಾಲ್ಲೂಕಿನ ನಂದಿಗದ್ದೆ ಗ್ರಾಮದಲ್ಲಿ 49ನೇ ವರ್ಷದ ಗಜಾನನೋತ್ಸವನ್ನು ಸಂಭ್ರಮ – ಸಡಗರದಿಂದ ಆಚರಿಸಲಾಗುತ್ತಿದೆ.. ಬುಧವಾರದಂದು ಶ್ರೀ ಮಹಾಗಣಪತಿ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಿ ಪ್ರಸಾದ ವಿತರಿಸಲಾಯಿತು ಇದರ ಅಂಗವಾಗಿ ಯುವಕ- ಯುವತಿ ಮಂಡಳಿಯವ ರಿಂದ ಭಜನೆ ನಡೆಯಿತು ಈ ಸಂದರ್ಭದಲ್ಲಿ ಗಜಾನನೋತ್ಸವ ಸಮಿತಿಯ ಅಧ್ಯಕ್ಷರು ಶ್ರೀ ಅಜಿತ್ ಆರ್ ಹೆಗಡೆ, ದಯಾನಂದ ದಾನಗೇರಿ, ಸುರೇಶ ಬಾಂದೇಕರ್, ಶಶಿಕಾಂತ ಎಸ್ ಹೆಗಡೆ, ಅನಂತ ಆರ್ ಭಟ್, ಸುಧಾಮ ಎಸ್ ದಾನಗೇರಿ ಮತ್ತು ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.
ಹಾಗೆಯೇ ಇಂದು ಗುರುವಾರ ಕೂಡ ಮಹಾ ಗಣಪತಿಯ ಪೂಜೆಯನ್ನು ಭಕ್ತಿಭಾವದಿಂದ ಆಚರಿಸಿ, ಸಾಯಂಕಾಲ ಮಕ್ಕಳಿಗೆ ಭಗವದ್ಗೀತೆ, ಭಜನೆ ಸ್ಪರ್ಧೆ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ.