ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಮೈನೋಳ ಗ್ರಾಮದ ಶ್ರೀ ರಾಮಲಿಂಗ ದೇವರ ವಾರ್ಷಿಕೋತ್ಸವ ದಿನಾಂಕ:26-03-2026 ರ ಗುರುವಾರದಂದು ನಡೆಯಲಿದೆ. ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ 12:30 ಗಂಟೆಗೆ ಶ್ರೀ ರಾಮಲಿಂಗ ದೇವರ ಮಹಾಅಭಿಷೇಕ,ಪೂಜೆ ನಡೆಯುವುದು. ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ. ರಾತ್ರಿ10:00 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10:00 ಗಂಟೆಗೆ ಶ್ರೀ ದೇವರ ಫಲಾಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಲಿದೆ.ಭಕ್ತರ ವಿಶೇಷ ಮನರಂಜನೆಗಾಗಿ ರಾತ್ರಿ12:00 ಗಂಟೆಗೆ ಶ್ರೀ ರಾಮಲಿಂಗ ತರುಣ ನಾಣ್ಯ ಮಂಡಲದ ಮೈನೋಳ ಕಲಾವಿದರಿಂದ ಅರ್ಪಿಸುವ ಶ್ರೀ ಗಣೇಶ ಹಿರ್ಲೇಕರ ವಿರಚಿತ ಜ್ವಾಲಾಮುಖಿ ಸಾಮಾಜಿಕ,ಹೃದಯಸ್ಪರ್ಶಿ,ಸಂಗೀತ, ‘ರಕ್ತಿಮಾ’ ಎಂಬ ಮರಾಠಿ ನಾಟಕದ ಪ್ರದರ್ಶನ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ರಾಮಲಿಂಗ ದೇವಸ್ಥಾನ ಸಮಿತಿ,ಊರ ನಾಗರೀಕರು ಮೈನೋಳ ವಿನಂತಿಸಿಕೊಂಡಿದ್ದಾರೆ.
