ಸುದ್ದಿ ಕನ್ನಡ ವಾರ್ತೆ
ಬೆಂಗಳೂರು:ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ ಸಭಾಪತಿ ಪೀಠದ ಸ್ಥಾನದಲ್ಲಿ ತತ್ಕಾಲೀನ ಸಭಾಪತಿಯಾಗಿ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರಿಗೆ ಅವರಿಗೆ ಅವಕಾಶ ದೊರೆತ್ತಿದ್ದು ಇತಿಹಾಸದಲ್ಲಿ ದಾಖಲೆಯಾಗಿ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಯಿತು. ಸಂಘ ಪರಿವಾರದ ಸಂಘಟನೆಗಳ ವಿವಿಧ ಕ್ಷೇತ್ರಗಳಲ್ಲಿ ,ಮುಖ್ಯವಾಗಿ ವನವಾಸಿ ಕಲ್ಯಾಣದ ಬುಡಕಟ್ಟು ಸಿದ್ದಿ ಜನಾಂಗದ ಬಂಧುವಾದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ದಿಯವರಿಗೆ ಮಂಗಳವಾರ ವಿಧಾನ ಪರಿಷತ್ತಿನ ಸಭಾಪತಿ ಪೀಠದ ಸ್ಥಾನದಲ್ಲಿ ಕೆಲಹೊತ್ತು ಸದನವನ್ನು ನಡೆಸುವ ಅವಕಾಶ ಪಡೆದರು. ಈ ಒಂದು ಅವಕಾಶ ಪಡೆದ ಶ್ರೀ ಶಾಂತಾರಾಮ ಸಿದ್ದಿಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು,ಬುಡಕಟ್ಟು ಸಿದ್ದಿ ಸಮುದಾಯದವರು ಸೇರಿದಂತೆ ಇನ್ನುಳಿದ ಸಮುದಾಯದ ಬಾಂಧವರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಸಿದ್ದಿ ಸಮುದಾಯಕ್ಕೆ ಸಂದ ದೊಡ್ಡ ಗೌರವ,ಸಂಘದೆಸೆಯಿಂದ ಸಾಧ್ಯವಾದ ಸಾಧನೆ ಎಂದು ಉತ್ತರಕನ್ನಡ ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಾಂತಾರಾಮ ಸಿದ್ದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಬಡ ತೀರಾ ಹಿಂದುಳಿದ ವನವಾಸಿ ಜನಾಂಗದ ಸಿದ್ದಿ ಸಮುದಾಯದಿಂದ ಬಂದು, ತನ್ನ ಸಿದ್ದಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ನಿರಂತರ ಹೋರಾಟ ಮಾಡಿಕೊಂಡು ಬಂದವರು ಶಾಂತಾರಾಮ ಸಿದ್ದಿ ಅವರು ಇದೆಲ್ಲದರ ಶ್ರಮದ ಫಲ ಶಾಸನಸಭೆಯ ಅತ್ಯುನ್ನತ ಮತ್ತು ಪವಿತ್ರ ಸ್ಥಾನ, ಸದನದ ಶಿಸ್ತು ಮತ್ತು ಸಂವಿಧಾನದ ಆಶಯಗಳ ಸಂಕೇತವಾಗಿರುವ ಪರಿಷತ್ತಿನ ಸಭಾಪತಿ ಸ್ಥಾನದಲ್ಲಿ ತತ್ಕಾಲೀನ ಸಭಾಪತಿಯಾಗಿ ಸದನವನ್ನು ನಡೆಸುವ ಅವಕಾಶ ಪಡೆದಿರುವುದು ನಮ್ಮ ಜಿಲ್ಲೆಗೆ ಹಾಗೂ ಸಿದ್ದಿ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕರಾದ ರೂಪಾಲಿ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ತಿನ ತತ್ಕಾಲೀನ ಸಭಾಪತಿಯಾಗಿ ಶಾಂತಾರಾಮ ಸಿದ್ದಿ;ಅಭಿನಂದನೆಗಳ ಮಹಾಪೂರ
