ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ಗಣೇಶ ದೇವಸ್ಥಾನದ ವಾರ್ಷಿಕೋತ್ಸವ ದಿನಾಂಕ:23-03-2026 ರ ಸೋಮವಾರದಂದು ನಡೆಯಲಿದೆ.
ವಾರ್ಷಿಕೋತ್ಸವದ ನಿಮಿತ್ತ ಬೆಳಿಗ್ಗೆ 10:00 ಗಂಟೆಗೆ ಶ್ರೀ ಗಣೇಶ ದೇವರ ಅಭಿಷೇಕ ಮಧ್ಯಾಹ್ನ 12:00 ಗಂಟೆಗೆ ಸತ್ಯನಾರಾಯಣ ಮಹಾಪೂಜಾ,2:00 ಗಂಟೆಯಿಂದ ಅನ್ನಸಂತರ್ಪಣೆ ನಡೆಯುವುದು. ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ. ಸಂಜೆ 5:00 ಗಂಟೆಗೆ ಭಜನಾ ಕಾರ್ಯಕ್ರಮ,ರಾತ್ರಿ 10:00 ಗಂಟೆಗೆ ಭಕ್ತರ ವಿಶೇಷ ಮನರಂಜನೆಗಾಗಿ ಉದಯಕಾಂತ ಅಡವೆಕರ ವಿರಚಿತ ಕೊಂಕಣಿ ಭಾಷೆಯ ಲಾಖಾತ್ ಏಕ್ ನವರೋ ಎಂಬ ನಾಟಕದ ಪ್ರದರ್ಶನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗಣೇಶ ಮಂದಿರ ಸಮಿತಿ, ಗಣೇಶಗಲ್ಲಿ, ರಾಮನಗರ ವಿನಂತಿಸಿಕೊಂಡಿದ್ದಾರೆ.
