ಸುದ್ದಿ ಕನ್ನಡ ವಾರ್ತೆ

ಜೊಯಿಡಾ- ಕರ್ನಾಟಕ ಪ್ರಾಂತ ರೈತ ಸಂಘ ಜೊಯಿಡಾ ತಾಲೂಕ ಸಮಿತಿಯ ಹೋರಾಟದ ಭಾಗವಾಗಿ ಹಾಗೂ ಹಳಿಯಾಳ ಜೊಯಿಡಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಆರ್ ವಿ ದೇಶಪಾಂಡೆ ಇವರ ಪ್ರಯತ್ನದಿಂದ ನಮ್ಮ ತಾಲೂಕಿನ ಕುಂಡಲ ವಸತಿ ಬಸ ಹಾಗೂ ಕಾರ್ಟೋಲಿಗೆ ಬಸ ವ್ಯವಸ್ಥೆ ಪ್ರಾರಂಭವಾಗಿದೆ.

ತಾಲೂಕಿನ ಎರಡೂ ಮನೆಗೂ ವಿಧ್ಯುತ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ರೀತಿ ಕಸಂಬಾ ಗ್ರಾಮಕ್ಕೆ ಎರಡೂ ಕಿಲೋ ಮೀಟರ್ ರಸ್ತೆಗೆ 20 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಕಿರವತ್ತಿಯಿಂದ ಎರಡೂ ಕಿಲೋ ಮೀಟರ್ ರಸ್ತೆ ಮರು ಡಾಂಬರೀಕರಣ ಆಗಿ ಸಾರ್ವಜನಿಕರಿಗೆ ಅನುಕೂಲ ಆಗಿರುತ್ತದೆ. ತಾಲೂಕಿನ ಉಳಿದ ಹತ್ತಾರು ಮನೆಗಳಿಗೆ ವಿಧ್ಯುತ ಸಂಪರ್ಕ ನೀಡುವ ಹಾಗೂ ಕಾರ್ಟೋಳಿಯಿಂದ ವಾಗೇಲಿ ವರೆಗೆ ರಸ್ತೆ ಮರು ಡಾಂಬರೀಕರಣ ನಿರ್ಮಾಣ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.

ಅವರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಹಳಿಯಾಳದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜೊಯಿಡಾ ತಾಲೂಕ ಅಧಕ್ಷರಾದ ಪ್ರೇಮಾನಂದ ವೆಲಿಪ್ ಕಾರ್ಯದರ್ಶಿ ರಾಜೇಶ ಗಾವಡಾ, ದಯಾನಂದ ನಾಯ್ಕ್, ವಿಠೋಬಾ ವೆಲಿಪ್ ಇವರು ಉಪಸ್ಥಿತರಿದರು.