ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ನಾಳೆ ವಿದ್ಯುತ್ ವ್ಯತ್ಯಯ ದಿನಾಂಕ 22 ರ ಭಾನುವಾರ ವಿದ್ಯುತ್ ವ್ಯತ್ಯಯ ವಾಗಲಿರುವ ಕುರಿತು ಹೆಸ್ಕಾಂ ಪತ್ರಿಕಾ ಪ್ರಕಟಣೆ ನೀಡಿದೆ.

ಕರ್ನಾಟಕ ನೀರಾವರಿ ನಿಗಮ ಖಾನಾಪುರ ವಿಭಾಗದ ಕಾಮಗಾರಿಯ ಮೊದಲನೇ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸಕ್ಕೆ ದಾಂಡೇಲಿ ತಾಲೂಕಿನ ಅಂಬೆವಾಡಿ 220/110/11 ಕೆ.ವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ಕೆಲಸದ ಕಾರಣ ನಾಳೆ ರವಿವಾರ ಬೆಳಿಗ್ಗೆ 9.30 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯವ ವಾಗಲಿದೆ. ದಾಂಡೇಲಿ ತಾಲೂಕು , ಜೊಯಿಡಾ ದ ರಾಮನಗರ ಹೊರಟು ಪಡಿಸಿ ಎಲ್ಲ ಗ್ರಾಪಂ ಭಾಗದಲ್ಲಿ ಮತ್ತು ಹಳಿಯಾಳದ ಕಾವಲವಾಡ ಉಪ ಕೇಂದ್ರದ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಸಹಕರಿಸಲು ಹೆಸ್ಕಾಂ ಅಭಿಯಂತರರು ಮತ್ತು ಕಾರ್ಯಪಾಲ ಅಭಿಯಂತರರು ಆಗಿರುವ ದೀಪಕ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಗದಿತ ಸಮಯಕ್ಕಿಂತ ಮೊದಲೇ ಕೆಲಸ ಮುಗಿದಲ್ಲಿ ವಿದ್ಯುತ್ ನೀಡಲಾಗುವದು ಎಂದೂ ತಿಳಿಸಿರುತ್ತಾರೆ.