ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ : ಮೀನು ಹಿಡಿಯಲು ಹೋದವರು ನೀರಲ್ಲಿ ಮುಳುಗಿ  ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.

ಮೀನು ಹಿಡಿಯಲು ಹೋದವರು ವಾಪಸ್ಸಾಗುತ್ತಿದ್ದಾಗ ಇಬ್ಬರು ಮಾದನಸರದ ಕವಲಗಿ ಹಳ್ಳದ ನೀರಿನಲ್ಲಿ ಮುಳುಗಿ ಕಾಣೆಯಾದ ಘಟನೆ ರವಿವಾರ ನಡೆದಿದೆ.

ಮಾದನಸರದ 8 ಮಂದಿ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋದಾ.ಗ ಮೀPನು ಹಿಡಿದು ವಾಪಸು ಬರುತ್ತಿರುವಾಗ ಕವಲಗಿ ಹಳ್ಳದಲ್ಲಿ ಒಮ್ಮೆಲೆ ನೀರು ಹೆಚ್ಚಾಗಿ ಮಹಮ್ಮದ ರಫೀಖ್ ಇಬ್ರಾಹಿಂ ಸಾಬ್ ಸೈಯದ್ (27 ವರ್ಷ) ಗೌಂಡಿ ಕೆಲಸ ಹಾಗೂ ಸಹಹೋದರ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯ್ಯದ್ (25 ವರ್ಷ) ಕೂಲಿಕೆಲಸ , ಮಾದನಸರ ಇವರು ಕವಲಗಿ ಹಳ್ಳದಲ್ಲಿ ಮುಳಗಿ ಕಾಣೆಯಾಗಿದ್ದಾರೆ.