ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಪ್ರೌಢಶಾಲೆಯಲ್ಲಿ2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು.

ವಿದ್ಯಾದೇವತೆಯಾದ ಸರಸ್ವತಿ ಪೂಜೆಯನ್ನು ಸಲ್ಲಿಸಲಾಯಿತು. ಬೀಳ್ಕೋಡುಗೆ ಸಮಾರಂಭದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಗೋಕುಲ ಸ್ಥಳೇಕರ ಎಲ್ಲರನ್ನು ಸ್ವಾಗತಿಸಿದರು. ನಂತರ ಸಹ ಶಿಕ್ಷಕ ವೃಂದದವರು ಮಾತನಾಡಿ ಮೂರು ವರ್ಷ ತಾವು ವಿದ್ಯಾಭ್ಯಾಸ ಮಾಡಿ ಮುಂದಿನ ವಿದ್ಯಾಭ್ಯಾಸಕ್ಕೆ ತಾವು ಹೋಗುತ್ತಿದ್ದೀರಿ ಒಳ್ಳೆಯ ರೀತಿಯಿಂದ ಸಮಾಜದಲ್ಲಿ ಬದುಕಲು ಕಲಿಯಿರಿ, ಶಿಕ್ಷಕರಿಗೆ ಗೌರವವನ್ನು ನೀಡಬೇಕು ಏಕೆಂದರೆ ನಿಮಗೆ ಮೂರು ವರ್ಷಗಳ ಕಾಲ ಶಿಕ್ಷಣವನ್ನು ನೀಡಿ ನಿಮ್ಮ ಏಳಿಗೆಯನ್ನು ಬಯಸಿದವರು ಶಿಕ್ಷಕರಾಗಿದ್ದಾರೆ.
ಪ್ರೌಢಶಾಲೆಗೆ ಉತ್ತಮ ಫಲಿತಾಂಶ ನೀಡಲು ಪ್ರಯತ್ನ ಮಾಡಬೇಕು ನೀವೆಲ್ಲ ಬಹಳ ಪುಣ್ಯ ಮಾಡಿದ್ದೀರಿ ಏಕೆಂದರೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಪಡೆದುಕೊಂಡು ಕಲಿಯುತ್ತಿರುವುದು. ಎಲ್ಲಾ ಶಿಕ್ಷಕರಿಗೆ ಮತ್ತು ತಂದೆ ತಾಯಿಗಳಿಗೆ ಗೌರವ ಕೊಡಬೇಕು. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಗೊನ್ಸಾಲಿಸ್ ಸರ್ ಮಾತನಾಡಿ ನಮ್ಮ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ತರಗತಿಗಳನ್ನು ಮತ್ತು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಸೇರಿದಂತೆ ವಾರ್ಷಿಕ ಕ್ರೀಯಾಯೋಜನೆಯ ಪ್ರಕಾರ ಎಲ್ಲಾ ಚಟುವಟಿಕೆಗಳನ್ನು ಮಾಡಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಹಮ್ಮಿಕೊಂಡು ಉತ್ತಮ ಫಲಿತಾಂಶ ಬರಲು ಎಲ್ಲಾ ಶಿಕ್ಷಕರು ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿ ಮಕ್ಕಳ ಸರ್ವೋತೊಮುಖ ಬೆಳವಣಿಗೆ ಆಗಲು ಶ್ರಮವಹಿಸಿದ್ದೇವೆ. ಈ ವರ್ಷವೂ ನೂರರಷ್ಟು ಫಲಿತಾಂಶ ಬರುವಂತೆ ವಿದ್ಯಾರ್ಥಿಗಳು ಶ್ರಮ ವಹಿಸಬೇಕೆಂದು ಶುಭ ಹಾರೈಸಿದರು. ವಿದ್ಯಾರ್ಥಿಗಳು ಮೂರು ವರ್ಷಗಳಿಂದ ಶಾಲೆಯಲ್ಲಿ ಪಡೆದ ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ನವೀನ ಶೇಟ್,ಗೋಕುಲ ಸ್ಥಳೇಕರ, ಪುರುಷೋತ್ತಮ ಜಿ,ಫಕೀರಪ್ಪ ದರಿಗೊಂಡ,ದಿವ್ಯಾ ಮೇಡಂ,ರಿಯಾ, ಬಸವರಾಜ್ ಇದ್ದರು.ಕೊನೆಯಲ್ಲಿ ಎಲ್ಲರಿಗೆ ವಂದನಾರ್ಪಣೆ ಸಲ್ಲಿಸಲಾಯಿತು.