ಸುದ್ದಿ ಕನ್ನಡ ವಾರ್ತೆ
ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸಮೀಪದ ಹಾಡಗೇರಿ ಗ್ರಾಮದಲ್ಲಿ ಮಂಗಗಳನ್ನು ಓಡಿಸಲು ಹೋದಾಗ ಏ‌ರ್ ಗನ್‌ನಿಂದ ಗುಂಡು ಸಿಡಿದು ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಮೃತ ಯುವಕ ಸುಬ್ರಹ್ಮಣ್ಯ ಮಂಜ ಮರಾಠಿ (18) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ವೇಳೆ ಮಂಗಗಳನ್ನು ಓಡಿಸಲು ಏರ್ ಗನ್ ತೆಗೆದುಕೊಂಡು ಹೋಗಿದ್ದ ವೇಳೆ ಆಕಸ್ಮಿಕವಾಗಿ ಆಯ ತಪ್ಪಿಬಿದ್ದು, ಏ‌ರ್ ಗನ್‌ನಿಂದ ಗುಂಡು ಸಿಡಿದು ಎದೆಗೆ ತಗುಲಿದೆ ಇದರ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಆಘಾತಕಾರಿ ಘಟನೆಯಿಂದ ಯುವಕನ ಕುಟುಂಬ ವರ್ಗದವರಲ್ಲಿ ಹಾಗೂ ಊರಿನಲ್ಲಿ ದುಃಖಕರ ವಾತಾವರಣ ನಿರ್ಮಾಣವಾಗಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.