ಸುದ್ದಿ ಕನ್ನಡ ವಾರ್ತೆ
ದಾಂಡೇಲಿ:ತಾಲೂಕಿನ ತಾಯಿ ಮತ್ತು ಮಕ್ಕಳ ಆರೈಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಗರ್ಭಿಣಿ ಮಹಿಳೆಗೆ A+ ರಕ್ತದ ಅವಶ್ಯಕತೆಯ ಮಾಹಿತಿಯನ್ನು ತಿಳಿದು,ರಕ್ತದಾನ ಮಾಡಿ ಮಾನವೀಯತೆಯನ್ನು ಮೆರೆದ ದಾಂಡೇಲಿ ನಗರ ಠಾಣೆಯ ಪಿಎಸ್ಐ ಆದ ಕಿರಣ ಪಾಟೀಲ. ನಗರದ ಟ್ರಾವೇಲ್,ಡೈರಿ ಉತ್ಪನ್ನಗಳ ಉದ್ಯಮಿಗಳು, ರಕ್ತದಾನಿಗಳು,ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ರಕ್ತದಾನ ಶ್ರೇಷ್ಠ ದಾನ,ಅದರ ಮಹತ್ವ ಅರಿತಿರುವ ಸುಧೀರ ಶೆಟ್ಟಿಯವರು ತಾಯಿ ಮತ್ತು ಮಕ್ಕಳ ಆರೈಕೆಯ ಆಸ್ಪತ್ರೆಯ ಗರ್ಭಿಣಿ ಮಹಿಳೆಗೆ A+ ರಕ್ತದ ಅವಶ್ಯಕತೆಯಿಂದು, ಯಾರಾದರು ದಾನಿಗಳಿದ್ದರೆ ನೀಡಬಹುದು ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಮಾಹಿತಿಯನ್ನು ತಿಳಿದು,ಆಸ್ಪತ್ರೆಗೆ ಭೇಟಿ ನೀಡಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದ ದಾಂಡೇಲಿಯ ನಗರ ಠಾಣೆಯ ಪಿಎಸ್ಐ ಕಿರಣ ಪಾಟೀಲರ ಕಾರ್ಯಕ್ಕೆ, ಹಾಗೂ ಮಾಹಿತಿ ಹಂಚಿಕೊಂಡ ರಕ್ತದಾನಿಗಳು ಆದ ಸುಧೀರ ಶೆಟ್ಟಿಯವರ ಕಾರ್ಯಕ್ಕೆ ಎಲ್ಲಡೇಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
