ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಡಗರ್ಣಿಯ ಶ್ರೀ ಸಾತೇರಿ ಜಲ್ಮೇಶ್ವರ ದೇವರ ವಾರ್ಷಿಕೋತ್ಸವ ದಿನಾಂಕ:15-03-2026 ರ ರವಿವಾರದಂದು ನಡೆಯಲಿದೆ.

ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ 12.00 ಗಂಟೆಗೆ ಶ್ರೀ ಸಾತೇರಿ ಜಲ್ಮೇಶ್ವರ ದೇವರ ಅಭಿಷೇಕ,ಮಧ್ಯಾಹ್ನ 1.00 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ,4:00 ಗಂಟೆಯಿಂದ ರಾತ್ರಿ 9:30ರ ವರೆಗೆ ಅನ್ನಸಂತರ್ಪಣೆ ನಡೆಯುವುದು. ರಾತ್ರಿ 10.00 ಗಂಟೆಗೆ ಸವಾಲ್ ಕಾರ್ಯಕ್ರಮ ನಡೆಯಲಿದೆ. ಭಕ್ತರ ವಿಶೇಷ ಮನರಂಜನೆಗಾಗಿ ಶ್ರೀ ಸಾತೇರಿ ಜಲ್ಮೇಶ್ವರ ನಾಟ್ಯ ಮಂಡಳಿ ಇವರು ಪ್ರದರ್ಶಿಸುವ ಮರಾಠಿ ಸುಂದರ ಪೌರಾಣಿಕ ದಶವತಾರಿ ಆಟದ ಪ್ರದರ್ಶನ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕ್ರಮದ ಸಂಘಟಕರು ವಿನಂತಿಸಿಕೊಂಡಿದ್ದಾರೆ.