ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದದ ಕ್ರೀಡಾ ಮೈದಾನದಲ್ಲಿ ಗುಂದ-11 ಕ್ರೀಡಾ ಸಂಘದ ವತಿಯಿಂದ ದಿನಾಂಕ:13-03-2026 ರಿಂದ 15-03-2026 ರವರೆಗೆ ಮೂರು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ಕ್ರೀಡಾಕೂಟದ ಉದ್ಘಾಟನೆ ವಿವಿಧ ಕ್ಷೇತ್ರದ ಗಣ್ಯರ,ದಾನಿಗಳ ಉಪಸ್ಥಿತಿಯಲ್ಲಿ ದಿನಾಂಕ:13-03-2026 ರ ಶುಕ್ರವಾರ ಬೆಳಿಗ್ಗೆ 8:30 ಗಂಟೆಗೆ ನಡೆಯಲಿದೆ. ಪಂದ್ಯಾವಳಿಯ ಸಮಾರೋಪ ಸಮಾರಂಭ 15-03-2026 ರ ಸಂಜೆ 5:00 ಗಂಟೆಗೆ ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
ಪಂದ್ಯಾವಳಿಯ ನಿಮಿತ್ತ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಪಂದ್ಯಾವಳಿಯಲ್ಲಿ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಎಲ್ಲ ರೀತಿಯ ತನು ಮನ ಧನದ ಸಹಕಾರ,ಪ್ರೋತ್ಸಾಹ ನೀಡಿ ಪಂದ್ಯಾವಳಿಯನ್ನು ಯಶಸ್ವಿ ಗೊಳಿಸಕೊಡಬೇಕೆಂದು ಗುಂದ-11 ಕ್ರೀಡಾ ಸಂಘದ ಪದಾಧಿಕಾರಿಗಳು,ಊರಿನ ನಾಗರೀಕರು ವಿನಂತಿಸಿದ್ದಾರೆ.
