ಸುದ್ದಿ ಕನ್ನಡ ವಾರ್ತೆ
ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಕಾರವಾರ-ಬೆಂಗಳೂರು ನಡುವೆ ನೂತನ ಹವಾ ನಿಯಂತ್ರಿತ ಸ್ಟೀಪ‌ರ್ ಪಲ್ಲಕ್ಕಿ ಬಸ್ ಸೇವೆಯು ಮಾರ್ಚ್ 11ರಿಂದ ಆರಂಭವಾಗಲಿದ್ದು, ಈ ಬಸ್ ಪ್ರತಿದಿನ ಅಂಕೋಲಾ-ಗೋಕರ್ಣ-ಶಿರಸಿ-ದಾವಣಗೆರೆ-ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ತಲುಪಲಿದೆ.

ಕಾರವಾರದಿಂದ ಸಂಜೆ 7.30ಕ್ಕೆ ಹೊರಟು, ಅಂಕೋಲಾ ರಾತ್ರಿ 8.15, ಗೋಕರ್ಣ 8.50, ಶಿರಸಿ 10.45 ಹಾಗೂ ಬೆಂಗಳೂರಿಗೆ ಬೆ.7.30 ಕ್ಕೆ ತಲುಪಲಿದ್ದು, ಬೆಂಗಳೂರಿನಿಂದ ರಾತ್ರಿ 8.15 ಕ್ಕೆ ಹೊರಟು ಬೆಳಗ್ಗೆ 8 ಗಂಟೆಗೆ ಕಾರವಾರ ತಲುಪಲಿದೆ. ಈ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ವಾ.ಕ.ರ.ಸಾ. ಸಂಸ್ಥೆಯ ಪ್ರಕಟಣೆ ತಿಳಿಸಿದೆ.