ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ 2025-26ನೇ ಸಾಲಿನ ಅತ್ಯುತ್ತಮ ಎಸ್ ಡಿ ಎಂ ಸಿ ಶಾಲೆಯಾಗಿ ಆಯ್ಕೆಯಾಗಿದೆ.
ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆಯು (ಶಾಲಾ ಶಿಕ್ಷಣ ಇಲಾಖೆ) 2025-26 ನೇ ಸಾಲಿನಲ್ಲಿ ಎಸ್ ಡಿ ಎಂ ಸಿ (SDMC) ಗಳ ಮೂಲಕ ಶಾಲಾ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣ ಮತ್ತು ದಾಖಲಾತಿ ಹೆಚ್ಚಳಕ್ಕೆ ಒತ್ತು ನೀಡುತ್ತಿದೆ.
ಪುಷ್ಟಿ ಯೋಜನೆ /ಎಸ್ ಡಿ ಎಂ ಸಿ (SDMC) 2025-26 ಪ್ರಮುಖಾಂಶಗಳು:
ಶಾಲಾ ಅಭಿವೃದ್ಧಿ ಯೋಜನೆ (SDP): 2025-26ನೇ ಸಾಲಿಗೆ SDMC ಸಮಿತಿಗಳು ಶಾಲೆಯ ಮೂಲಸೌಕರ್ಯ, ಬೋಧನಾ ಗುಣಮಟ್ಟ ಮತ್ತು ದಾಖಲಾತಿ ಹೆಚ್ಚಳಕ್ಕಾಗಿ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು.
ಪಾರದರ್ಶಕತೆ: SDMC ಸಭೆಗಳಲ್ಲಿ ಪೋಷಕರ ಪಾಲ್ಗೊಳ್ಳುವಿಕೆ ಮತ್ತು ಶಾಲಾ ಅನುದಾನದ ಸಮರ್ಪಕ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು.
ವಿಶೇಷ ಪ್ರೋತ್ಸಾಹ: ST ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ SSLC, ಪದವಿ, ಮತ್ತು ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅಂಕ ಗಳಿಸಿದರೆ ವಿಶೇಷ ಪ್ರೋತ್ಸಾಹಧನ/ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜವಾಬ್ದಾರಿ: ಶಿಕ್ಷಕರ ಹಾಜರಾತಿ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಶಾಲಾ ಆವರಣದ ನಿರ್ವಹಣೆಯನ್ನು SDMC ಮೇಲ್ವಿಚಾರಣೆ ಮಾಡುವುದು.ಈ ಎಲ್ಲಾ ಅಂಶಗಳನ್ನು ಸಮೀಕ್ಷಾ ತಂಡದವರು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಲಾಗಿದೆ. ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯು ಪುಟ್ಟ ಹಳ್ಳಿ.ಇಂತಹ ಹಳ್ಳಿಯ ಪರಿಸರದಲ್ಲಿನ ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ಪಾಲಕರಲ್ಲಿನ ಶಿಕ್ಷಣಾಸಕ್ತಿ,ಶಿಕ್ಷಕರ ನಿರಂತರ ಪರಿಶ್ರಮದಿಂದ ತಾಲೂಕಿನ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಿ ಕೊಡುವ ಜವಾಬ್ದಾರಿ ಪಾಲಕರ ಮೇಲಿರುತ್ತದೆ.ಜೊತೆಗೆ ಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ.ಅಂದಾಗ ಮಾತ್ರ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸುಲಭವಾಗುತ್ತದೆ.ಈ ಎಲ್ಲಾ ಅಂಶಗಳನ್ನು ಶಿಂದೋಳಿ ಶಾಲೆಯಲ್ಲಿ ಕಾಣಬಹುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 44 ವಿದ್ಯಾರ್ಥಿಗಳ ಹಾಜರಾತಿ ಇದ್ದು, ಈ ಶಾಲೆಯಲ್ಲಿನ ವಿದ್ಯಾರ್ಥಿಗಳು ಕಲಿಕಾ ಹಬ್ಬ,ಪ್ರತಿಭಾ ಕಾರಂಜಿ, ಕ್ರೀಡಾಕೂಟದಲ್ಲಿ ಕ್ಲಸ್ಟರ್, ತಾಲೂಕು,ಜಿಲ್ಲಾ,ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಹೆಗ್ಗಳಿಕೆಯ ಜೊತೆಯಲ್ಲಿ ಕ್ಲಸ್ಟರಿನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜನೆ,ಶಾಲೆಯಲ್ಲಿ ಎಲ್ಲಾ ರಾಷ್ಟ್ರೀಯ ಹಬ್ಬಗಳು,ಮಹಾನ್ ಪುರುಷರ,ವೀರ ವನಿತೆಯರ ಜಯಂತಿಗಳ ಆಚರಣೆ, ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಆಯೋಜನೆ ಹೆಮ್ಮೆಯ ಸಂಗತಿಯಾಗಿದೆ. ಶಿಂದೋಳಿ ಶಾಲೆಯ ಎಸ್ ಡಿ ಎಂ ಸಿ ಕ್ರೀಯಾಶೀಲ ಅಧ್ಯಕ್ಷರಾದ ಗುರುನಾಥ ಮಾಜಾಳಕರ ಉಪಾಧ್ಯಕ್ಷರಾದ ತನುಜಾ ಮಸೂರಕರ ಸದಸ್ಯರುಗಳಾದ ವಾಸುದೇವ ಕಾಪೋಲ್ಕರ್,ತುಕಾರಾಮ ಠಾಕೂರ,ಸಂಜಯ ಗಾವಂಕರ,ದೇವಿದಾಸ ಗಾವಡೆ,ಪ್ರಮೋದ ವಟಲೇಕರ್,ನಾಮದೇವ ಮಿರಾಶಿ,ನಾರಾಯಣ ಠಾಕೂರ,ನಾರಾಯಣ ಮಿರಾಶಿ,ಆನಂದಿ ಕರಂಜೋಳಕರ ,ನಂದಿನಿ ಕಾಪೋಲ್ಕರ,ಪೂಜಾ ವಟಲೇಕರ್,ನವಿತಾ ಮಿರಾಶಿ,ಅಂಬಿಕಾ ಮಾಜಾಳಕರ ,ರಾಮೇಶ್ವರಿ ಗೋವಿಲ್ಕರ,ದರ್ಶನಾ ಬಾಂಡೋಲ್ಕರ,ಸುನಂದಾ ಮಿರಾಶಿ ಇವರುಗಳು ಶಾಲೆಯ ಶೈಕ್ಷಣಿಕ ವಿಭಾಗದ ಎಲ್ಲಾ ಚಟುವಟಿಕೆಗಳಿಗೆ ತನು ಮನ ಧನದ ಸಹಕಾರ,ಶಾಲೆಯ ಸಭೆಗಳಲ್ಲಿ ಎಲ್ಲರೂ ಪಾಲ್ಗೊಳ್ಳುವಿಕೆ,ಶಾಲಾ ಅನುದಾನದ ಸಮರ್ಪಕ ಬಳಕೆ,ಶಿಕ್ಷಕರ ಹಾಜರಾತಿ, ವಿದ್ಯಾರ್ಥಿಗಳ ದಾಖಲಾತಿ,ಶಾಲಾ ಆವರಣದ ನಿರ್ವಹಣೆ, ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿರುವುದು. ಜೊತೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಅನಿಲ ರಾಠೋಡ,ಸಹ ಶಿಕ್ಷಕರಾದ ಶ್ರೀ ಆನಂದ ಪಿ,ಶ್ರೀಮತಿ ವಿದ್ಯಾ ಕುಂಬಾರ ಅವರನ್ನೊಳಗೊಂಡ ಶಿಕ್ಷಕ ವೃಂದದವರ ಸಮರ್ಪಣಾ ಮನೋಭಾವ,ನಿರಂತರ ಪರಿಶ್ರಮ,ಗ್ರಾಮಸ್ಥರ ಜತೆಗಿನ ಉತ್ತಮ ಬಾಂಧವ್ಯ,ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಹೆಚ್ ಭಾಗವಾನರವರ ನಿರಂತರ ಮಾರ್ಗದರ್ಶನ,ಸಹಕಾರ, ಪ್ರೋತ್ಸಾಹ,ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ರವರ ಪ್ರೋತ್ಸಾಹ,ಇಲಾಖೆಯ ಅಧಿಕಾರಿ ವರ್ಗದವರ,ನಿಕಟಪೂರ್ವ ಗ್ರಾಮ ಪಂಚಾಯತ(ಮಾಜಿ) ಸದಸ್ಯರಾದ ನಾಗೇಶ ಕಾಪೋಲಕರ,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಅಮರೇಶ ರಾಠೋಡ ಅಸು ಗ್ರಾಮ ಪಂಚಾಯತದವರ,ಅನೇಕ ಗಣ್ಯರ ನೆರವು ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ವಿಭಾಗದಲ್ಲಿನ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅನೇಕ ವರ್ಷಗಳಿಂದ ವಿದ್ಯಾದಾನ ಮಾಡಿದ ಗುರುಗಳು, ಶ್ರಮಿಸಿದ ಎಸ್ ಡಿ ಎಂ ಸಿ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರು, ದಾನಿಗಳು ಮತ್ತು ಗ್ರಾಮಸ್ಥರು; ಎಲ್ಲರ ಒಕ್ಕೂಟವೇ ಈ ಶಾಲೆಗೆ ಪ್ರಶಸ್ತಿಯ ಕೀರಿಟ . ಮನೆಮನೆಗೆ ತೆರಳಿ ಸಮಿತಿಯ ಸದಸ್ಯರು ನಮ್ಮೂರ ಶಾಲೆಯ ಮನವರಿಕೆ ಕಾರ್ಯಕ್ರಮವು ಶಾಲೆಯ ಮೇಲಿನ ಜನಾಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಗ್ರಾಮೀಣ ಭಾರತದಲ್ಲಿ ಸರ್ಕಾರಿ ಶಾಲೆಗಳು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ,ಜೋಯಿಡಾ ತಾಲೂಕಿನ ಶಿಂದೋಳಿ ಶಾಲೆಯ ಸಾಧನೆ ಒಂದು ಮಾದರಿ. ಈ ಶಾಲೆ ಮಕ್ಕಳಿಗೆ ಜ್ಞಾನ ದೀಪ ಹಚ್ಚುವ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸೋಣ. ಶಿಂದೋಳಿ ಶಾಲೆಯು ಅತ್ಯುತ್ತಮ ಎಸ್ ಡಿ ಎಂ ಸಿ ಯಾಗಿ ಆಯ್ಕೆಯಾದ ಬಗ್ಗೆ ಗಣ್ಯರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ,ಸಿಬ್ಬಂದಿ ವರ್ಗದವರು, ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು,ಶಿಕ್ಷಕ ವೃಂದದವರು,ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ಶಿಂದೋಳಿ ಶಾಲೆಯು ಇಲ್ಲಿನ ಕ್ರೀಯಾಶೀಲ ಪಾಲಕರ, ಪೋಷಕರ,ಎಸ್ ಡಿ ಎಂ ಸಿ ಅಧ್ಯಕ್ಷರ,ಉಪಾಧ್ಯಕ್ಷರ, ಸರ್ವ ಸದಸ್ಯರ,ಇಲಾಖೆಯ ಅಧಿಕಾರಿಗಳ ಸಹಭಾಗಿತ್ವದ ಸಹಕಾರದ ಪರಿಣಾಮ ಶಾಲಾ ಶೈಕ್ಷಣಿಕ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದು,ನಮ್ಮ ಶಾಲೆಯ ಜೋಯಿಡಾ ತಾಲೂಕು ಮಟ್ಟದ 2025-26 ನೇ ಸಾಲಿನ ಅತ್ಯುತ್ತಮ ಎಸ್ ಡಿ ಎಂ ಸಿ ಶಾಲೆಯಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ.(ಶ್ರೀ ಅನಿಲ ರಾಠೋಡ ಮುಖ್ಯ ಶಿಕ್ಷಕರು,ಶಿಂದೋಳಿ ಶಾಲೆ.)
