ಸುದ್ದಿ ಕನ್ನಡ ವಾರ್ತೆ

ಅಂಕೋಲಾ :ಗಾoವ್ಕರ ಮೆಮೋರಿಯಲ್ ಟ್ರಸ್ಟ್ ನಿಂದ ರವಿವಾರ ಅಂಕೋಲಾ ದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಪ್ರತಿಭಾ ಪುರಸ್ಕಾರ, ಉಪನ್ಯಾಸ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಶೇಷ ಕಾರ್ಯಕ್ರಮ ವನ್ನುಚಿತ್ರ ನಟಿ ಹರ್ಷಿತಾ ಪೂಣಚ್ಚ ಅವರು ಉದ್ಘಾಟನೆ ಮಾಡುವರು, ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ರಾದ ಗಂಗಾಧರ ಹಿರೇಗುತ್ತಿ ಅವರು ವಹಿಸುವರು, ರಣಾಜಿತ್, ಬೀರಣ್ಣ ನಾಯಕ ಕೆ ಎಲ್ ಈ ಬೆಳಗಾವಿ ಇವರಿಂದ ಉಪನ್ಯಾಸಕ, ಮತ್ತು ಜನಪ್ರಿಯ ಕವಿಯಿತ್ರಿ ಅಕ್ಷತಾ ಕೃಷ್ಣ ಮೂರ್ತಿ ಇವರಿಂದ ಪುಸ್ತಕ ಪರಿಚಯ ನಡೆಯಲಿದೆ.

ಅನೇಕ ಪ್ರತಿಭಾನ್ವಿತರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತಿದ್ದು ಅವರಲ್ಲಿ, ದೇಶೀ ಪ್ರತಿಭೆ ಜೋಯಿಡಾ ದ ಸಾಯಿನಾಥ್ ಧವನ್, ಕುಮಟಾ ದ ಬಹುಮುಖ ಪ್ರತಿಭೆ ಮಹಾತ್ಮ ಜೈನ, ಯಲ್ಲಾಪುರ ದ ಪುಟ್ಟ ಅತ್ರೇಯ ಗಾoವ್ಕರ್, ಕಾರವಾರ ದ ವಾಯುಪಡೆಯ ಹೆಣ್ಣು ಸಾಯಿಶ್ರೀ ನಾಯ್ಕ್, ಅಂಕೋಲಾ ದ ಬಂಗಾರದ ಹುಡುಗಿ ಎನ್ ಅಧಿತಿ, ದಾಂಡೇಲಿ ಯ ಕ್ರೀಡಾ ಪಟು ನವನೀತ ನಾಯಕ, ಭಟ್ಕಳ ದ ಧಾಖಲೆ ನಿರ್ಮಾಪಕಿ ಕಲ್ಪನಾ ಮೊಗೇರ, ಮುಂಡಗೋಡ ದ ಕಲಾರತ್ನ ಅಮಿತಾ ನಾಯ್ಕ್, ಹೊನ್ನಾವರ ದ ಯಶವಂತ ದಿವಟೆ, ಹಳಿಯಾಳ ದ ಪ್ಯಾಷನ್ ಶಫಿಕಾ ಕಾಗದ, ಇವರೆಲ್ಲ ಗಣ್ಯರ ಸಮ್ಮುಖದಲ್ಲಿ ತಮ್ಮ ಪ್ರತಿಭೆ ಗಾಗಿ ಸನ್ಮಾನಿತ ರಾಗಲಿದ್ದಾರೆ, ಕಾರ್ಯಕ್ರಮ ದಲ್ಲಿ ಆಸಕ್ತರು ಭಾಗವಹಿಸ ಬಹುದು ಎಂದು ಸಂಘಟಕರು ಪ್ರಕಟಿಸಿದ್ದಾರೆ.