ಸುದ್ದಿ ಕನ್ನಡ ವಾರ್ತೆ

ಹಳ್ಳಿ ಗಳಲ್ಲಿ ಮದುವೆ ಮುಂಜಿ ಇನ್ನಿತರ ಕಾರ್ಯಕ್ರಮ ಗಳ ತಯಾರಿ ಸುಲಭವಲ್ಲ, ಆದರೂ ತಯಾರಿ ಮಾಡಲೇ ಬೇಕು, ಹೊರಗಡೆ ಛತ್ರ ಗಳಲ್ಲಿ ಮದುವೆ ಮಾಡೋಣ ಎಂದರೂ ಲಕ್ಷಾಂತರ ರೂಪಾಯಿ ಗಳ ಬಾಡಿಗೆ, ಜೊತೆಗೆ ಊರಿನ ಜನರನ್ನು ಒಯ್ಯುವದು, ತರುವುದು ಕೂಡ ಕಷ್ಟ ಜೊತೆಗೆ ಊರಿನ ಎಲ್ಲರೂ ಮನೆ ಬಿಟ್ಟು ಹೋಗುವುದು ಕಷ್ಟ, ಊರಲ್ಲೇ ಕಾರ್ಯಗಳು ನಡೆದರೆ ಆ ವೇಳೆಗೆ ಹೋಗಿ ಬರಲು ಅನುಕೂಲ, ಎಂದು ಎಷ್ಟೇ ಕಷ್ಟ ವಾದರೂ ಹಳ್ಳಿ ಮನೆಗಳಲ್ಲಿ ಮದುವೆ ಕಾರ್ಯಕ್ರಮ ಗಳನ್ನು ನಡೆಸುತ್ತಿದ್ದಾರೆ.

ಒಂದು ಮೆಚ್ಚುವಂತಹದು ಎಂದರೆ ಊರಿನ ಜನರ ಸಹಕಾರ. ತಮ್ಮ ಮನೆ ಕೆಲಸ ಎಂದೇ ತಿಳಿದು ಊರಿನ ಜನರು ಸಹಕಾರ ನೀಡುತ್ತಾರೆ. ಮನೆ ಯಜಮಾನ ಎಲ್ಲ ಸಹಕಾರ ನೀಡುವ ಮೂಲಕ ಗ್ರಾಮಸ್ತರಿಗೆ ಹೇಗೆ ಆಗಬೇಕೆಂದು ತಿಳಿಸುತ್ತಾನೆ ಅದರಂತೆ ಗ್ರಾಮಸ್ಥರು ಯಜಮಾನನ ಮಾತಿನಂತೆ ಎಲ್ಲ ಕೆಲಸ ಕಾರ್ಯ ಗಳನ್ನು ನಿಯತ್ತಾಗಿ ಮಾಡುವ ಮೂಲಕ ಹಳ್ಳಿ ಗಳಲ್ಲಿಯೂ ಮದುವೆ ಕಾರ್ಯಗಳು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.

ಈ ಪದ್ದತಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರೆಗೂ ಉತ್ತಮ ವಾಗಿ ನಡೆದುಕೊಂಡು ಬಂದಿದೆ. ಅದರಲ್ಲೂ ಹವ್ಯಕರ ಮನೆ ಗಳಲ್ಲಿ ಎಲ್ಲ ಬಾಗದ ಹವ್ಯಕರು ಬಂದು ತಮಗೆ ಹೇಳಿದ ಕೆಲಸ ಕಾರ್ಯ ಗಳನ್ನು ಸರಿಯಾದ ವೇಳೆಗೆ ಮಾಡುವ ಮೂಲಕ ಕಾರ್ಯಕ್ರಮ ಗಳು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಈ ವಿಷಯ ಹೇಳಲು ಕಾರಣ ಇಷ್ಟೇ ತಂದೆ ತಾಯಿ ಯರನ್ನು ತನ್ನ ಚಿಕ್ಕ ವಯಸ್ಸಿನಲ್ಲೇ ಕಳೆದು ಕೊಂಡ ಸುಸ್ಮಿತಾ ದೇಸಾಯಿ,ತನ್ನ ಮನೆಯ ಅಣ್ಣ ನ ಆಶ್ರಯದಲ್ಲಿ ಬೆಳೆದು ಕಲಿತು ಈಗ ಬೆಂಗಳೂರಲ್ಲಿ ಉದ್ಯೋಗಿ ಯಾಗಿದ್ದಾಳೆ. ಅವಳು ಕುಟುಂಬದ ಎಲ್ಲರಿಗೂ ತಂಗಿ, ಅಕ್ಕ , ಆಗಿದ್ದಾಳೆ,ಅವಳ ಮದುವೆ ನಾಳೆ 5 ರಂದು ಅವಳ ಮನೆ ಶೇವಾಳಿಯ ಅಣ್ಣ ಶ್ರೀನಾಥ ದೇಸಾಯಿ ಮತ್ತು ಶ್ರೀಮತಿ ಸರೋಜಾ ದಂಪತಿಗಳ ಮನೆಯಲ್ಲಿ ನಡೆಯಲಿದೆ.ಆ ಕಾರಣ ಕುಟುಂಬದ ಎಲ್ಲ ಮಹನೀಯರು ಮಹಿಳೆಯರು ವೈದಿಕರ ಮಂತ್ರ ಘೋಷ ಗಳ ನಡುವೆ ಮದುವೆ ಕಾರ್ಯದಲ್ಲಿ ಬಾಗಿಯಾಗಿದ್ದಾರೆ. ಮದುಮಗಳಿಗೆ ಯಲ್ಲಾಪುರ ತಾಲೂಕಿನ ಸಂಜಯ ಗಂಡ ನಾಗಲಿದ್ದಾನೆ.