ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಅಣ್ಣನ ಹೆಸರಿನಲ್ಲಿ ತಮ್ಮ ಕಾಲೇಜಿಗೆ ಪ್ರವೇಶ ಪಡೆದು ವಿಶ್ವವಿದ್ಯಾಲಯಕ್ಕೆ ವಂಚಿಸಿ ಪರೀಕ್ಷೆ ಬರೆದಿರುವ ಬಗ್ಗೆ ಗುರುವಾರ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಟ್ಕಳ ನಿವಾಸಿ ರಂಜಿತಕುಮಾರ ದುರ್ಗಪ್ಪ ನಾಯ್ಕ ಎನ್ನುವವವರು ತನ್ನ ಅಣ್ಣನಾದ ರೋಹಿತಕುಮಾರ ದುರ್ಗಪ್ಪ ನಾಯ್ಕ ಹೆಸರಿನಲ್ಲಿ ಭಟ್ಕಳ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿಗೆ ಪ್ರವೇಶ ಪಡೆದು ೩ ವರ್ಷದಿಂದ ತರಗತಿಗೆ ಹಾಜರಾಗಿ ಜು.೭ರಂದು ನಡೆದ ವಿಶ್ವವಿದ್ಯಾಲಯ ಪರೀಕ್ಷೆ ಸಮಯದಲ್ಲಿ ಪರೀಕ್ಷೆ ಬರೆಯುವಾಗ ವಿಚಕ್ಷಣ ದಳದವರು ನಕಲಿ ವಿದ್ಯಾರ್ಥಿಯ ಗುರುತು ಪತ್ತೆ ಹಚ್ಚಿ ಎಂ.ಪಿ.ಸಿ. ಪ್ರಕರಣ ದಾಖಲಿಸಿದ ನಂತರದಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ ಅವರು ಈ ಪ್ರಕರಣಕ್ಕೆ ಸಂಬAಧಿಸಿದAತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.