ಸುದ್ದಿ ಕನ್ನಡ ವಾರ್ತೆ

ಶಿರಸಿ: ಮಾರ್ಚ ೩ ಮಂಗಳವಾರ ಸಂಭವಿಸಲಿರುವ ಗ್ರಸ್ತೋದಯ ಚಂದ್ರಗ್ರಹಣದ ಆಚರಣೆ ಕುರಿತು ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನವು ಭಕ್ತರಿಗೆ ಮಾರ್ಗದರ್ಶನ ನೀಡಿದೆ.

ಬಗ್ಗೋಣ ಪಂಚಾಂಗದ ಪ್ರಕಾರ, ಅಂದು ಮುಂಜಾನೆ 9:47ರ ನಂತರ ಗ್ರಹಣ ಮೋಕ್ಷದವರೆಗೆ ಭೋಜನವನ್ನು ನಿಷೇಧಿಸಲಾಗಿದೆ.

​ಮಠದ ಶಿಷ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಕರು ಅಂದು ಮಧ್ಯಾಹ್ನ 3:20ರಿಂದಲೇ ಸ್ನಾನ, ಜಪ ಹಾಗೂ ತಪಾನುಷ್ಠಾನಗಳನ್ನು ಆರಂಭಿಸಬೇಕು. ಗ್ರಹಣ ಮೋಕ್ಷ ಸಂಜೆ ೬.೪೭ಕ್ಕೆ ಪೂರ್ಣವಾಗಲಿದೆ ಎಂದು ಮಠ ಸೂಚಿಸಿದೆ.

​ ಧರ್ಮಸಿಂಧು ಹಾಗೂ ವಿವಿಧ ಧರ್ಮಶಾಸ್ತ್ರಗಳ ಉಕ್ತಿಗಳ ಆಧಾರದ ಮೇಲೆ ಈ ಗ್ರಹಣಾಚರಣೆಯನ್ನು ವಿಧಿಸಲಾಗಿದೆ. ಭಕ್ತರು ಜಪಾದಿ ಅನುಷ್ಠಾನಗಳಲ್ಲಿ ತೊಡಗಿಸಿಕೊಂಡು ಕೃತಾರ್ಥರಾಗಬೇಕೆಂದು ಮಠದ ಪ್ರಕಟಣೆ ತಿಳಿಸಿದೆ.