ಸುದ್ದಿ ಕನ್ನಡ ವಾರ್ತೆ
ಶಿರಸಿ: ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.
ದೇವಾಲಯದ ಪರವಾಗಿ ನಾಗೇಂದ್ರ ಶೇಟ್ ಶ್ರೀ ಗಳನ್ನು ಬರಮಾಡಿಕೊಂಡರು.
ಶ್ರೀಗಳೊಂದಿಗೆ ಡಾ. ಕೆ.ಭೀಮಾ, ರವೀಂದ್ರ ಕುಮಾರ, ಗುಳೆದಗುಡ್ಡದ ಶ್ರೀಧರ ಶೇಟ್, ಎಂ.ಕೆ.ಹುಬ್ಬಳ್ಳಿ ಗಂಗಾಧರ ತುರಮರಿ, ನಾಗೇಂದ್ರ ಉಪಸ್ಥಿತರಿದ್ದರು.