ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಜನತೆ ಮುಗ್ದರು ಎನ್ನುತ್ತಾ ಜನರಿಗೆ ಬೇಕಾದ ಭಾಗ್ಯವನ್ನು ನೀಡದ ಸರಕಾರದ ಮೇಲೆ ತಾಲೂಕಿನ ಜನತೆ ಮುನಿಸಿ ಕೊಂಡಿದ್ದಾರೆ, ಸರಕಾರ ಜನತೆಗೆ ಪಂಚ ಭಾಗ್ಯ ನೀಡುತ್ತಿದೆ ಎಂದು ಹೇಳಿದರೂ, ಇದೆಲ್ಲ ತಾತ್ಕಾಲಿಕ ವಾಗಿದೆ.

ಇಂದು ಇದ್ದು ನಾಳೆ ಹೋಗಬಹುದು ಅಲ್ಲದೇ ಈ ಭಾಗ್ಯ ಗಳನ್ನು ಜನತೆ ಕೇಳಿದ್ದಲ್ಲ, ಸರಕಾರ ಅಸ್ತಿತ್ವಕ್ಕೆ ಬರಲಿ ಎಂದು ಈಗಿನ ಸರಕಾರ ಘೋಷಿಸಿಕೊಂಡ ಭಾಗ್ಯ ಗಳು. ತಾಲೂಕಿನ ಜನತೆಗೆ ಕಳೆದ ಹಲವಾರು ವರ್ಷ ಗಳಿಂದ ಬೇಕಾದ ಭಾಗ್ಯ ಗಳಲ್ಲಿ ಮೊದಲನೆಯದು, ತಾಲೂಕಿಗೊಂದು ನ್ಯಾಯಾಲಯ, ಎರಡನೆಯದು, ಸಾರಿಗೆ ಘಟಕ, ಮೂರನೆಯದು, ತಾಲೂಕಿಗೆ ಅವಶ್ಯಕತೆ ಇದ್ದ ಸಬ್ ರಜಿಷ್ಟ್ರರ್ ಕಚೇರಿ,ಗಳಿಲ್ಲ. ಇದು ಗೊತ್ತಿದ್ದೂ ಶಾಸಕರಾಗಲಿ, ಜನಪ್ರತಿನಿದಿನಗಳಾಗಲಿ, ಮಂಜೂರಿ ಮಾಡಿಸದೇ ಇದ್ದಿದ್ದು ನೋಡಿದರೆ, ಇವರನ್ನು ಆಯ್ಕೆ ಮಾಡುವ ತಾಲೂಕಿನ ಜನರು ಮುಗ್ದರೇ ಆಗಿರುತ್ತಾರೆ, ಆ ಕಾರಣ ದಿಂದ ಪದೇ ಪದೇ ತಾಲೂಕಿನ ಜನರು ಮುಗ್ದರು ಎಂದು ಜನಪ್ರತಿನಿದಿನಗಳು ತಾಲೂಕಿನ ಜನತೆಯನ್ನು, ಗೌರವಿಸುವುದು ಹಾಸ್ಯಾಸ್ಪದ ದಂತೆ ಯಾಕೆ ಕಾಣುತ್ತಿಲ್ಲ ಎಂದು ಯೋಚಿಸುವಂತೆ ಮಾಡಿದೆ.

ದಾಂಡೇಲಿ ತಾಲೂಕು ಆಗುವ ಮೊದಲೇ ಅಲ್ಲಿ ನ್ಯಾಯಾಲಯ, ಬಸ್ ಘಟಕ, ಸಬ್ ರಜಿಷ್ಟ್ರರ ಕಚೇರಿ ಎಲ್ಲವೂ ಆಗಿದೆ, ಆಗ ಜೋಯಿಡಾ ತಾಲೂಕಿನ ಜನತೆ, ನೋಡಿದರೆ ಹೊರತು ತಮಗೂ ಇದೆಲ್ಲಾ ಬೇಕು ಎಂದು ಕೇಳಲಿಲ್ಲವೇ,? ಜೋಯಿಡಾ ತಾಲೂಕಾ ಕೇಂದ್ರ ವಾದರೂ ಈ ಇಲ್ಲಗಳ ನಡುವೆ ಮತ್ತೆ ಚುನಾವಣೆ ಬರುತ್ತಿದೆ, ಈಗಲಾದರೂ ರಾಜಕಾರಣಿ ಗಳ ಬೆಣ್ಣೆ ಮಾತಿಗೆ ಕರಗದೆ, ತಾಲೂಕಿಗೆ ಬೇಕಾದ, ಅವಶ್ಯಕತೆ ಇರುವ ಕಚೇರಿ, ತರುವುದಾದರೆ, ಮತನಿಡಿ ಗೌರವಿಸಿ, ಇಲ್ಲ ವಾದರೆ ಮತ್ತೆ ಮುಗ್ದ ರಂತೆ ಇರೋದು ಒಳ್ಳೆಯದೇನೋ ಎನ್ನುವ ಮಾತುಗಳು ಕೇಳಿ ಬರುತ್ತಿವೆ, ವಿದ್ಯಾರ್ಥಿಗಳಿಗೆ ವಯಸ್ಸಾದವರಿಗೆ ಬಸ್ ಪಾಸ್ ಬೇಕಾದರೆ ದಾಂಡೇಲಿ,ಸಬ್ ರಜೀಷ್ಟ್ರರ ಕೆಲಸಕ್ಕೆ, ಹಳಿಯಾಳ, ಬಸ್ ಬೇಕು ಎಂದು ಹೇಳಲು ದಾಂಡೇಲಿ, ನ್ಯಾಯಾಲಯ ಕೆಲಸಕ್ಕೆ ದಾಂಡೇಲಿ, ಹೀಗೆ ಎಲ್ಲ ಕೆಲಸಕ್ಕೆ ತಾಲೂಕಿನ ಹೊರಗೆ ಓಡಾಡುವುದೇ ಜನತೆಯ, ವಿದ್ಯಾರ್ಥಿಗಳ ಕಾಯಕ ವಾಗಿದೆ,ಇದು ಗೊತ್ತಿದ್ದೂ ಸುಮ್ಮನಿರುವ ಮುಗ್ದ ರಾಜಕಾರಣಿಗಳು, ಮುಂದೆ ಬರುವ ಚುನಾವಣೆ ಯಲ್ಲಿ ನಿಮಗೆ ಮತ್ತೆ ನಕ್ಷತ್ರ ತೋರಿಸುವ, ಕೊಡುವ ಆಶ್ವಾಸನೆ ನೀಡ ಬಹುದು ಹುಷಾರು, ಎಂದು ಹಿರಿಯರೊಬ್ಬರು ಹೇಳಿದ್ದಾರೆ, ಇದು ಸತ್ಯವೇ ಆಗಿದೆ, ತಾಲೂಕಿನ ಜನರು ಇನ್ನೂ ಸರಿಯಾದ ರಸ್ತೆ,ಸೇತುವೆ, ಆಸ್ಪತ್ರೆ, ಗಳಿಲ್ಲದೇ, ಸಾರಿಗೆ, ಸಮಸ್ಯೆ ಇಂದ ಒದ್ದಾಡುತ್ತಲೇ ಇದ್ದಾರೆ, ಹಾಗಾಗಿ ನ್ಯಾಯಾಲಯ, ಸಾರಿಗೆ ಘಟಕ, ಉಪ ನೋಂದಣಿ ಕಚೇರಿ, ಗಳು ಬೇಕೇಬೇಕು ಎಂದು ಪ್ರಯತ್ನಿಸುತ್ತಿರುವ ತಾಲೂಕಿನ ಸಂಘಟನೆಗೆ ಜನರು ಸಾಥ್ ನೀಡಬೇಕಾಗಿದೆ.

ತಾಲೂಕಿನ ಜನತೆಗೆ ಕುಡಿಯಲು ನೀರಿಲ್ಲದೆ ಇದ್ದರೂ ಬೇರೆ ಬೇರೆ ಜಿಲ್ಲೆ ಗಳಿಗೆ ಕಾಳಿ ನದಿ ನೀರುಹೋಗುತ್ತಿದೆ ಇದು ಮೆಚ್ಚು ವಂತಹುದು, ಹಾಗೆಯೇ ತಾಲೂಕು ಕೂಡ ಎಲ್ಲವೂ ಇಲ್ಲದೇ ಬೇರೆ ಬೇರೆ ತಾಲೂಕು ಗಳಿಗೆ ಹಂಚಿ ಹೋದರೂ ಆಶ್ಚರ್ಯ ವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.