ಸುದ್ದಿ ಕನ್ನಡ ವಾರ್ತೆ
ಅನಮೋಡ ದಲ್ಲಿ ಅಕ್ರಮ ಮದ್ಯ ವಶ….
ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗ ಮಂಗಳೂರು ರವರ ನಿರ್ದೇಶನ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ . ಕಾರವಾರ ಮತ್ತು ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ರವರ ಮಾರ್ಗದರ್ಶನದಲ್ಲಿ ದಿನಾಂಕ : 27/ ರಂದು ಮಧ್ಯಾಹ್ನ 1.50 ಗಂಟೆ ಸಮಯದಲ್ಲಿ ಟಿ.ಬಿ.ಮಲ್ಲಣ್ಣವರ ಅಬಕಾರಿ ಉಪ ನಿರೀಕ್ಷಕರು ಅನಮೋಡ್ ತನಿಖಾ ಠಾಣೆ ಅನಮೋಡ ಹಾಗೂ ಸಿಬ್ಬಂದಿಗಳಾದ ಆನಂದ ರಡ್ಡಿ ಶ್ರೀಶೈಲ ಹಡಪದ , ಮತ್ತು ರಮೇಶ ರಾಠೋಡ ರವರು ಅನ್ಮೋಡ ತನಿಖಾ ಠಾಣೆ ಯಲ್ಲಿ ಅಬಕಾರಿ ಅಕ್ರಮಗಳ ಪತ್ತೆಗಾಗಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿರುವಾಗ ಬಂದ ಖಚಿತ ಬಾತ್ಮಿ ಮೇರೆಗೆ ಒಂದು ಟಾಟಾ ಕಂಪನಿಯ ಇಂಟ್ರಾ ಫಿಕ್ ಅಪ್ ವಾಹನವು ಗೋವಾ ದಿಂದ ರಾಮನಗರದ ಕಡೆಗೆ ಬರುವುದು ಕಂಡುಬಂದಿದ್ದು, ಸದರಿ ವಾಹನವನ್ನು ತನಿಖಾ ಠಾಣೆಯ ಬದಿಯಲ್ಲಿ ನಿಲ್ಲಿಸಿ ವಾಹನವನ್ನು ತಪಾಸಣೆ ನಡೆಸಿದಾಗ 67.000 ಲೀ ಗೋವಾ ರಾಜ್ಯದ ಮದ್ಯ ಪತ್ತೆಯಾಗಿದ್ದು ದೊರೆತ ಮದ್ಯ ಹಾಗೂ ಒಂದು ಟಾಟಾ ಕಂಪನಿಯ ಇಂಟ್ರಾ ವಾಹನವನ್ನು ಜಪ್ತುಪಡಿಸಿಕೊಂಡು ಅಬಕಾರಿ ಉಪ ನಿರೀಕ್ಷಕರು ದಾಂಡೇಲಿ ವಲಯ ರವರಿಗೆ ಮುದ್ದೆಮಾಲು, ಟಾಟಾ ಕಂಪನಿಯ ಇಂಟ್ರಾ ವಾಹನ ವನ್ನು ಹಸ್ತಾಂತರಿಸಲಾಯಿತು.
ಮದ್ಯದ ಮೌಲ್ಯ 16080/- ರೂಪಾಯಿಗಳು ಮತ್ತು ವಾಹನದ ಅಂದಾಜು ಮೌಲ್ಯ 6 ಲಕ್ಷ ರೂಪಾಯಿಗಳು.
ಒಟ್ಟು ಮೌಲ್ಯ 6 ಲಕ್ಷ 16 ಸಾವಿರದ 80 ರೂಪಾಯಿಗಳಾಗಿರುತ್ತದೆ
