ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿಯ ಕೃಷಿಕ ಸಾಂಬಶಿವ ಹೆಬ್ಬಾರ್ ಕಾಣೆಯಾಗಿದ್ದಾರೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲವಳ್ಳಿಯ ಕೃಷಿಕ ಸಾಂಬಶಿವ ಹೆಬ್ಬಾರ್ ರವರು ಜನವರಿ 31ರಂದು ಯಲ್ಲಾಪುರ ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಮಧ್ಯಾಹ್ನ 3 ಗಂಟೆಗೆ ಬೈಕ್ ನಲ್ಲಿ ಹೊರಟಿದ್ದರು. ನಂತರ ಮಲವಳ್ಳಿಯ ವಿಶ್ವನಾಥ್ ಭಟ್ ರವರ ಮನೆ ಬಳಿ ಬೈಕ್ ಇರಿಸಿ ಬಸ್ ಏರಿ ಯಲ್ಲಾಪುರಕ್ಕೆ ತಲುಪಿದ್ದರು.
ಆದರೆ ಬೇಟೆಗೆ ಹೋದವರು ಅವರು ಎಲ್ಲಿ ಹೋದರು ಎಂದು ಯಾರಿಗೂ ಗೊತ್ತಾಗಲಿಲ್ಲ. ಬಹಳ ಹೊತ್ತಾದರೂ ಅವರು ಮನೆಗೆ ವಾಪಸ್ಸಾಗದ ಕಾರಣ ಪತ್ನಿ ಶಾರದ ಹೆಬ್ಬಾರ್ ರವರು ಆತಂಕಗಳಾಗಿ ಅಲ್ಲಿ ಇಲ್ಲಿ ವಿಚಾರಣೆ ಆರಂಭಿಸಿದರು.
ಈ ಹಿನ್ನೆಲೆಯಲ್ಲಿ ಇದೀಗ ಶಾರದಾ ಹೆಬ್ಬಾರ್ ರವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಸಾಂಬಶಿವ ಹೆಬ್ಬಾರ್ ರವರಿಗಾಗಿ ಹುಡುಕಾಟ ನಡೆಸಿದ್ದಾರೆ.