ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಬಾಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಬಾಜಾರಕುಣಂಗ ಗ್ರಾಮದಲ್ಲಿ ಸಾವಯವ ಕೃಷಿ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

ಸಹಾಯಕ ಕೃಷಿ ನಿರ್ದೇಶಕರಾದ ಸುಂದರ ಟಿ ಹೆಚ್ ಪ್ರಾಸ್ತಾವಿಕ ಮಾತನಾಡಿ ಜೊಯಿಡಾ ತಾಲೂಕು ಸಂಪೂರ್ಣ ಸಾವಯವ ತಾಲೂಕು ಎಂದು ಪರಿವರ್ತನೆ ಮಾಡಬೇಕಾಗಿದೆ ಅದಕ್ಕಾಗಿಯೇ ಈ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ಈ ಯೋಜನೆ ಅಂತರ್ಗತ ಸರಕಾರದ ಅನೇಕ ಯೋಜನೆಗಳನ್ನು ರೈತರು ಸದುಪಯೋಗ ಪಡೆಯಬೇಕು ಎಂದರು.
ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಬಂದು ರೈತರಿಗೆ ಸಾವಯವ ಕೃಷಿ ಬಗ್ಗೆ ಸಂಪೂರ್ಣ ಕೊಂಕಣಿ ಹಾಗೂ ಕನ್ನಡ ಭಾಷೆಗಳಲ್ಲಿ ಮಾಹಿತಿ ನೀಡಿದರು ಹಾಗೂ ಅದರ ಸಾಧಕ ಬಾಧಕಗಳನ್ನು ವಿವರಿಸಿದರು. ವಿವಿಧ ಹಳ್ಳಿಗಳಿಂದ ಬಂದ ಸುಮಾರು ಅರವತ್ತಕ್ಕೂ ಹೆಚ್ಚು ರೈತರು ಉಪಸ್ತಿತರಿದ್ದರು.

ಈ ಸಂಧರ್ಭದಲ್ಲಿ ಕೃಷಿ ಅಧಿಕಾರಿಗಳು ಶ್ರೀ ಇಬ್ರಾಹಿಂ ಕೆ, ಸಹಾಯ ತಾಂತ್ರಿಕ ವ್ಯವಸ್ಥಾಪಕ ಆಕಾಶ ಶಿಂಧೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾಸವರಾಜ, ಗ್ರಾಮದ ಪ್ರಮುಖರಾದ ಗಣಪತಿ ಸಾವಂತ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಜಿತ ಮಿರಾಶಿ, ಸದಾನಂದ ಸಾವಂತ, ಕೃಷಿ ಸಕಿ ಪ್ರಿಯಾಲಿ ಮಿರಾಶಿ, ಪಂಚಾಯತ ಸಿಬಂದಿ ದಯಾನದ ಮಿರಾಶಿ, ದೀಪಕ ಸಾವಂತ, ಅಶೋಕ್ ಗಾವಡೆ ಮುಂತಾದವರು ಉಪಸ್ತಿತರಿದ್ದರು.