ಸುದ್ದಿ ಕನ್ನಡ ವಾರ್ತೆ

ಜೋಯಿಡಾತಾಲೂಕಿನ ಅವುರ್ಲಿ ಗ್ರಾಮದ ಶ್ರೀ ಸೋಮೇಶ್ವರ ದೇವರ ಜಾತ್ರಾ ಉತ್ಸವದ ನಿಮಿತ್ತ ಇತ್ತೀಚೆಗೆ ಸತ್ಯ ನಾರಾಯಣ ಪೂಜೆ ಮಹಾಪೂಜೆ, ಮತ್ತು ಮಹಾಮಂಗಳಾರತಿ ನಡೆಯಿತು. ಮದ್ಯಾಹ್ನ 1:00 ಘಂಟೆಯಿಂದ ರಾತ್ರಿ9:30ರ ವರೆಗೆ ಅನ್ನಸಂತರ್ಪಣೆ ನಡೆಯಿತು.ಸುಮಾರು 500ಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ಶ್ರೀಸೋಮೇಶ್ವರ ರಂಗಮಂದಿರದಲ್ಲಿ ನಡೆದ ಸವಾಲ ಕಾರ್ಯಕ್ರಮದಲ್ಲಿ ಶ್ರೀ ದೇವರ ಮೊದಲ ಸವಾಲ ಅನಿಲ ಶೇಟಕರ ಸ್ವೀಕರಿಸಿದರೆ,ಕೊನೆಯ ಸವಾಲ ಪ್ರಸಾದವನ್ನು ಪ್ರೇಮಾ ವೇಳಿಪ ಇವರು 62,000 ರೂಪಾಯಿ ನೀಡಿ ಸ್ವೀಕರಿಸಿದರು, ದೇವಸ್ಥಾನ ಸಮಿತಿಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ನಂತರ ರಾತ್ರಿ 11:00ಘಂಟೆಗೆ ಶ್ರೀ ಸೋಮೇಶ್ವರ ನಾಟ್ಯ ಮಂಡಳಿ ಅವುರ್ಲಿ ಸ್ಥಳೀಯ ಕಲಾವಿದರಿಂದ ಹಣೆ ಬರಹಕ್ಕೆ ಹೊಣೆ ಯಾರು ಎಂಬ ಸುಂದರ ಸಾಮಾಜಿಕ ಕೌಟುಂಬಿಕ ಕನ್ನಡ ನಾಟಕ ಪ್ರದರ್ಶನ 500 ಕ್ಕೂ ಹೆಚ್ಚು ಅಕ್ಕ ಪಕ್ಕದ ಗ್ರಾಮಗಳಿಂದ ಸೇರಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಹ ಕುಟುಂಬ ಪರಿವಾರ ಸಮೇತ ಭಾಗವಹಿಸಿ ಶ್ರೀ ಸೋಮೇಶ್ವರ ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನ ಸಮಿತಿಯವರು, ಗ್ರಾಮಸ್ಥರು ಜಾತ್ರಾ ಉತ್ಸವದ ಯಶಸ್ಸಿಗೆ ಸಹಕರಿಸಿದರು.