ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ರಾಮನಗರ ಕ್ಲಸ್ಟರಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯಲ್ಲಿ 9 ನೇ ಸಂಭ್ರಮ ಶನಿವಾರ ಚಟುವಟಿಕೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಾನುಸಾರ ಪ್ರತಿ ತಿಂಗಳಿನ ಮೂರನೇಯ ಶನಿವಾರರಂದು ಶಾಲೆಯಗಳಲ್ಲಿ ಸಂಭ್ರಮ ಶನಿವಾರ ಚಟುವಟಿಕೆಯ ಕಾರ್ಯಕ್ರಮ ಆಯೋಜಿಸುವುದರ ಭಾಗವಾಗಿ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರ ಸಹಕಾರದಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮದ ಚಟುವಟಿಕೆಯ ಭಾಗವಾಗಿ ಆರನೇಯ ತರಗತಿಯ ವಿದ್ಯಾರ್ಥಿಗಳಿಗೆ ಮೊದಲನೆಯ ಅವಧಿ ಅರಿವು ಇದರಲ್ಲಿ ಶಾಲೆಯ ಆಟದ ಮೈದಾನ ಸುರಕ್ಷಿತವೇ ಎಂಬ ವಿಷಯದ ಚಟುವಟಿಕೆಯ ಬಗ್ಗೆ ಚರ್ಚಿಸಿ,ಆಟದ ಮೈದಾನದಲ್ಲಿ ಸಂಭವಿಸಬಹುದಾದ ಅನಾಹುತಗಳು ಹಾಗೂ ಮುನ್ನಚ್ಚೇರಿಕೆಯ ಕ್ರಮಗಳ ಬಗ್ಗೆ ಮಕ್ಕಳ್ಳೊಂದಿಗೆ ಚರ್ಚಿಸಲಾಯಿತು. ಎರಡನೇ ಅವಧಿ ಅನುಭವದಲ್ಲಿ ನಾವು ಎನು ಮಾಡಬೇಕು ಎಂಬ ವಿಷಯದ ಚಟುವಟಿಕೆಯಲ್ಲಿ ಯಾವುದಾದರೂ ಹೊಸ ವಿದ್ಯಾರ್ಥಿ ಶಾಲೆಗೆ ಬಂದಾಗ ಅವನೊಂದಿಗೆ ಹೇಗೆ ಮಾತನಾಡಬೇಕು.ಗೊತ್ತಿಲ್ಲದ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗಲು ಹೋಗಬೇಕಾದ ಸಂದರ್ಭ ಬಂದರೆ,ರಾಸಾಯನಿಕ ಪ್ರಯೋಗ ಮಾಡುವಾಗ ಗೆಳೆಯ ಕೈ ಸುಟ್ಟು ಕೊಂಡರೆ ಎನು ಮಾಡಬೇಕು ಹೀಗೆ ಅನೇಕ ಸಂದರ್ಭಗಳ ಬಗ್ಗೆ ವಿದ್ಯಾರ್ಥಿಗಳಿಂದ ಅವರ ಅನುಭವ ಕೇಳಲಾಯಿತು. ಕೊನೆಯ ಅವಧಿ ಅವಲೋಕನದಲ್ಲಿ ಸುರಕ್ಷಿತ ಹಾಗೂ ಅಸುರಕ್ಷಿತ ವಿಷಯದಲ್ಲಿ ಈಜು ಕೊಳದ ಸನ್ನಿವೇಶ ಹಾಗೂ ಆಟದ ಮೈದಾನದ ಸನ್ನಿವೇಶ ಕುರಿತಾದ ಅಪಘಾತಗಳ ಸಂದರ್ಭದಲ್ಲಿ ರಕ್ಷಣೆ ಮತ್ತು ಭದ್ರತೆಯ ಕುರಿತಾದ ವಿಷಯಗಳ ಬಗ್ಗೆ ಚರ್ಚೆ ನಂತರ ಅವುಗಳನ್ನು ಚಿತ್ರಗಳ ಮೂಲಕ ಬಿಡಿಸಿ ಮಕ್ಕಳಿಂದ ಅದರ ವಿವರವಾದ ಮಾಹಿತಿಯನ್ನು ಪ್ರದರ್ಶಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ವಿವಿಧ ರೀತಿಯ ಹಿಂಸೆಗಳು, ಅಪರಾಧಗಳು ಹಾಗೂ ಅಪಘಾತದ ಸಂದರ್ಭದಲ್ಲಿನ ರಕ್ಷಣೆ,ಭದ್ರತೆಯ ಬಗೆಗಿನ ವಿವರವಾದ ಮಾಹಿತಿಯನ್ನು ನೀಡಿದರು. ಶಾಲೆಯ ಸಹ ಶಿಕ್ಷಕಿಯರಾದ ನಾಗರತ್ನಾ ಮೊಗೇರ,ಅನಿಸ್ ಫಾತೀಮಾ,ಸುನಿತಾ ಆರ್, ಸಂಜನಾ ಮಿರಾಶಿ ಮಕ್ಕಳಿಗೆ ಮಾರ್ಗದರ್ಶನ,ಸಹಕಾರ ನೀಡಿದರು.
