ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಜೋಯಿಡಾ ತಾಲೂಕಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಮಾ ಕರ್ಚು ಲೆಕ್ಕಪತ್ರವನ್ನು ಕನ್ನಡ ಸಾಹಿತ್ಯ ಪರಿಷತ್ತು ಜೋಯಿಡಾ ವತಿಯಿಂದ ಇಂದು ತಾ. ಪಂ. ಸಭಾಭವನದಲ್ಲಿ ಘೋಷಿಸಲಾಯಿತು.

ಲೆಕ್ಕಪತ್ರ ವಿವರವನ್ನು ಸಭೆಗೆ ಮಂಡಿಸಿದ ಕಾರ್ಯದರ್ಶಿ ಭಾಸ್ಕರ ಗಾಂವಕರ, ನಂದಿಗದ್ದೆಯಲ್ಲಿ ಕಳೆದ 4, ಮಾರ್ಚ 2025 ರಂದು ನಡೆದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಭಿಮಾನಿಗಳಿಂದ ಹಾಗೂ ಧಾನಿಗಳಿಂದ ಕ್ರೊಡಿಕರಣಗೊಂಡ ಒಟ್ಟು ಮೋತ್ತ ರೂ. 3.56, 242 ವಾದರೆ , ಸಮ್ಮೇಳನ ಸಂಘಟನೆಗೆ ಕರ್ಚಾಗಿರುವ ಒಟ್ಟು ಮೊತ್ತ ರೂ 3,84,671 ಆಗಿದೆ. ಹೆಚ್ಚುವರಿಯಾಗಿ ರೂ 30,983 ಕರ್ಚು ತಗುಲಿದ್ದಾಗಿ ತಿಳಿಸಿದರು. ಒಟ್ಟಾರೆ ಕರ್ಚಿನಲ್ಲಿ ಸುಮಾರು 1,10,000 ಕೊರತೆಯನ್ನು ಮುಂಲಾಳತ್ವ ವಹಿಸಿದ್ದ ಅರುಣ ದೇಸಾಯಿ ವಹಿಸಿದ್ದು, ಅವರ ಈ ನೆರವಿಗೆ ಕ. ಸಾ. ಪ. ಜೋಯಿಡಿ ಘಟಕ ಕೃತಜ್ಞತೆ ಸಲ್ಲಿಸಿದ್ದಾಗಿ ತಿಳಿದರು. ಕರ್ಚುವೆಚ್ಚ ವಿವರವನ್ನು ಓದಿ ಹೇಳಿದರು.

ನಂದಿಗದ್ದೆ ಗ್ರಾ. ಪಂ. ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿ, ನಂದಿಗದ್ದೆಯಲ್ಲಿ ಸಮ್ಮೇಳನ ಅಭುತಪೂರ್ವ ಯಶಸ್ಸು ಕಾಣುವ ಮೂಲಕ ಜಿಲ್ಲೆಯಾದ್ಯಂತ ಪ್ರಶಂಸೆಗೆ ಕಾರಣವಾಗಿದೆ. ಈ ಯಶಸ್ಸಿನ ಕೀರ್ತಿಯನ್ನು ಸಂಪೂರ್ಣ ನಮ್ಮ ನಂದಿಗದ್ದೆ ಗ್ರಾ. ಪಂ. ವ್ಯಾಪ್ತಿಯ ಗ್ರಾಮಸ್ಥರು ಮತ್ತು ಸಹೃದಯಿಗಳಿಗೆ ಅರ್ಪಿಸುವುದಾಗಿ ಹೇಳಿದರು. ಅಲ್ಲದೆ ಈ ಸಮ್ಮೇಳನದ ವೆಚ್ಚದಲ್ಲಿ ಕೊರತೆ ಬಿದ್ದಿರುವ ಅನುದಾನ ರೂಪಾಯಿ 1,10,000 ವನ್ನು ಕ. ಸಾ. ಪ. ಜೋಯಿಡಾ ಅಥವಾ ಇನ್ನಾವುದೇ ಸಾಹಿತ್ಯಾಸಕ್ತರು ಒಧಗಿಸಿದಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನಕ್ಕೆ ಆ ಸಂಪೂರ್ಣ ಮೋತ್ತವನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ಹೇಳಿದರು.
ನಿಕಟಪೂರ್ವ ಕ. ಸಾ. ಪ. ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ, ಸಮ್ಮೇಳನ ಆರಂಭದಲ್ಲಿ ಅನೇಕರು ಸಂಘಟನೆಗೆ ಅಡ್ಡಗಾಲು ಹಾಕಿದ್ದಾಗಿಯೂ ಕೂಡಾ ಕ. ಸಾ. ಪ. ಜೋಯಿಡಾ ಮತ್ತು ಸ್ಥಳಿಯ ಸಂಘಟನೆಯವರು ಎದೆಗುಂದದೆ ನಾಲ್ಕನೆ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಎಲ್ಲಾ ಕನ್ನಡ ಆಸಕ್ತರನ್ನು ಅಭಿನಂದಿಸುತ್ತಿದ್ದಾಗಿ ಹೇಳಿದರು.

ಕ. ಸಾ. ಪ. ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ, ಸಮ್ಮೇಳನ ನಡೆಸಲು ಆರ್ಥಿಕ ಸಂಪನ್ಮೂಲ ಕ್ರೊಡಿಕರಣ ಕಷ್ಟಸಾಧ್ಯವಾಗಿರು ನಮ್ಮ ತಾಲೂಕಿನಲ್ಲಿ ನಾಲ್ಕನೆ ಸಮ್ಮೇಳನದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಆರ್ಥಿಕ ಸಂಪನ್ಮೂಲ ಜೊತೆ ಸಂಘಟನೆಯಲ್ಲಿ ಅವಿರತ ಪ್ರಯತ್ನಿಸಿ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಗ್ರಾ. ಪಂ. ಅಧ್ಯಕ್ಷ ಅರುಣ ದೇಸಾಯಿ ಯವರಿಗೆ ಕ. ಸಾ. ಪ. ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಸಾಹಿತಿ, ಕವಿಯಿತ್ರಿಯಾಗಿರುವ ಶ್ರೀಮತಿ ಸುಕನ್ಯಾ ದೇಸಾಯಿ ಯವರಿಗೂ, ಯಶಸ್ಸಿಗೆ ಸಹಕಾರ ನೀಡಿದ ಮಾನ್ಯ ಶಾಸಕರಾದ ಆರ್. ವಿ. ದೇಶಪಾಂಡೆ ರವರಿಗೂ, ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಬಿ. ಎನ್. ವಾಸರೆಯವರಿಗೂ, ತಾಲೂಕಿನ ಎಲ್ಲಾ ಜನಪ್ರತಿನಿದಿಗಳಿಗೂ, ತಾಲೂಕಾ ದಂಡಾಧಿಕಾರಿ, ತಾ. ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೂ, ಹಾಗೂ ತಾಲೂಕಿನ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳು, ನಂದಿಗದ್ದೆ ಪಂ. ವ್ಯಾಪ್ತಿಯ ಸಮಸ್ತ ನಾಗರಿಕರಿಗೆ, ಮಾದ್ಯಮ ಮಿತ್ರರ ಸಹಕಾರವನ್ನು ನೆನೆದು ಅಭಿನಂದಿಸಿದರು. ಸಮ್ಮೇಳನ ಯಶಸ್ಸಿಗೆ ಸಹಕರಿಸಿದ ತಾಲೂಕಿನ ಕನ್ನಡ ಅಭಿಮಾನಿ ಬಂದುಗಳಿಗೆ, ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ. ಸಾ. ಪ. ಹಾಗೂ ತಾಲೂಕಾ ಆಡಳಿತದ ಪರವಾಗಿ ಸಮ್ಮೇಳನದ ಯಶಸ್ವಿ ನೇತ್ರತ್ವ ವಹಿಸಿದ್ದ ಅರುಣ ದೇಸಾಯಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು. ವತಿಯಿಂದ
ಈ ಸಂದರ್ಭದಲ್ಲಿ ಪ್ರಮುಖರಾದ ತಾ. ಪಂ. ಆಡಳಿತ ಪರವಾಗಿ ಅಧಿಕಾರಿ ನಜೀರ ಅಕ್ಕಿ, ಗಾಂಗೋಡಾ ಗ್ರಾ. ಪಂ. ಮಾಜಿ ಅಧ್ಯಕ್ಷ ಪ್ರವೀಣ ದೇಸಾಯಿ, ಕಾರ್ಯದರ್ಶಿ ಪ್ರೇಮಾನಂ ವೇಳಿಪ, ಸದಾನಂದ ಉಪಾದ್ಯ, ಸುಭಾಷ ವೇಳಿಪ, ದೇವಿದಾಸ ದೇಸಾಯಿ, ಸುರೇಶ ವೇಳಿಪ, ಮಹಮ್ಮದ ಅಲಿ ಚಪ್ಪರಬಂದ, ಹಾಗೂ ತಾ. ಪಂ. ಸಿಬ್ಬಂದಿಗಳು, ಕನ್ನಡ ಅಭಿಮಾನಿಗಳು ಪಾಲ್ಗೋಂಗಿದ್ದರು.