ಸುದ್ದಿ ಕನ್ನಡ ವಾರ್ತೆ
. ದಾಂಡೇಲಿ:ದಾಂಡೇಲಿ ಹಾಗೂ ಹಳಿಯಾಳ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆಸಲ್ಲಿಸುತ್ತಿರುವ ದಾಂಡೇಲಿಯ ನಿವಾಸಿ ಪದ್ಮಾವತಿ ಎನ್.ಮಾದಿಗ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
2025 ರ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಪದ್ಮಾವತಿಯವರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಇವರು ದಿ.ನಾಗಣ್ಣ ಮತ್ತು ನಾಗಮ್ಮ ದಂಪತಿಗಳ ಸುಪುತ್ರಿಯಾಗಿದ್ದಾರೆ. ನ್ಯಾಯಾಧೀಶರಾಗಿ ಆಯ್ಕೆಯಾದ ಪದ್ಮಾವತಿ ಮಾದಿಗ ಅವರನ್ನು ದಾಂಡೇಲಿ ಹಾಗೂ ಹಳಿಯಾಳ ತಾಲೂಕಿನ ಗಣ್ಯರು,ವಕೀಲ ವೃತ್ತಿಯ ಬಳಗದವರು ಅಭಿನಂದಿಸಿದ್ದಾರೆ.
