ಸುದ್ದಿ ಕನ್ನಡ ವಾರ್ತೆ
ಜೊಯಿಡಾ= ಕರ್ನಾಟಕ ಪ್ರಾಂತ ರೈತ ಸಂಘದ ಬಹು ದಿನದ ಬೇಡಿಕೆ ಕುಂಡಲ ವಸತಿ ಬಸ ಪ್ರಾರಂಭಿಸಬೇಕು ಹಾಗೂ ಕಾರ್ಟೂಲಿ ಭಾಗಕ್ಕೆ ಬಸ ವ್ಯವಸ್ಥೆ ಆಗಬೇಕು ಈ ಬೇಡಿಕೆ ನಮ್ಮ ಭಾಗದ ಹಳಿಯಾಳ ಜೊಯಿಡಾ ಕ್ಷೇತ್ರದ ಜನಪ್ರಿಯ ಶಾಸಕರಾದ ಹಾಗೂ ಕರ್ನಾಟಕ ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಮಾನ್ಯ ಶ್ರೀ ಆರ್. ವಿ. ದೇಶಪಾಂಡೆಯವರು ಅಧ್ಯಕ್ಷತೆಯಲ್ಲಿ ರೈತ ಸಂಘದ ಜೊತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಯಶಸ್ವಿಯಾಗಿ ಜಂಟಿ ಸಭೆ ನಡೆಸಿದರು. ಆ ಸಭೆಯಲ್ಲಿ ಕುಂಡಲ ವಸತಿ ಬಸ ಹಾಗೂ ಕಾರ್ಟೋಲಿಗೆ ಬಸ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಆ ಭರವಸೆ ಮೇರಿಗೆ ಕುಂಡಲ ವಸತಿ ಬಸ ಹಾಗೂ ಕಾರ್ಟೋಲಿಗೆ ಬಸ ವ್ಯವಸ್ಥೆ ಪ್ರಾರಂಭಿಸಿದರು. ಅದ ಕಾರಣ ಆ ಭಾಗದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಬಹಳ ಅನುಕೂಲ ಆಗಲಿದೆ ಅದ ಕಾರಣ ಹಳಿಯಾಳ ಜೊಯಿಡಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಆರ್. ವಿ. ದೇಶಪಾಂಡೆಯವರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಪರವಾಗಿ ಹಾಗೂ ಎಲ್ಲಾ ಸಾರ್ವಜನಿಕ ಪರವಾಗಿ ಅಭಿನಂದನೆಗಳು.
ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಪ್ರೇಮಾನಂದ ವೆಲಿಪ್, ಕಾರ್ಯದರ್ಶಿ ರಾಜೇಶ ಗೌಡಾ, ದಿಗಂಬರ ದೇಸಾಯಿ, ದಿವ್ಯಾ ನಾಯ್ಕ್, ವಿಠೋಬಾ ವೆಲಿಪ್, ದಯಾನಂದ ನಾಯ್ಕ್, ಅಶೋಕ ವೆಲಿಪ, ಸಂತೋಷ ವೆಲಿಪ್, ಚುಡಗೊ ನಾಯ್ಕ್, ಕಮಲಾಕರ ವೆಲಿಪ , ಸದಾನಂದ ದೇಸಾಯಿ, ಕೃಷ್ಣಾ ಸಾವಂತ, ರತ್ನಾಕರ ನಾಯ್ಕ್, ಗೋವಿಂದ, ರತ್ನಾಕರ ಗಾವದಾ ಮುಂತಾದವರು ಉಪಸ್ತಿತರಿದ್ದರು.
