ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಸರಕಾರಿ ಪ್ರೌಢಶಾಲೆ ಬಾಪೇಲಿಕ್ರಾಸ್ ನಲ್ಲಿ ದಿನಾಂಕ: 17.02.2026 ರ ಮಂಗಳವಾರರಂದು ವೃತ್ತಿ ಮಾರ್ಗದರ್ಶನದ ಅಡಿಯಲ್ಲಿ ವೃತ್ತಿ ಮೇಳವನ್ನು ಆಯೋಜಿಸಿದ್ದು,ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮೋಹನ ಮಾವಸ್ಕರ ಸೇರಿದಂತೆ, ಸದಸ್ಯರು, ದೇಶಪಾಂಡೆ ರುಡ್ ಸೆಟ್ ನ ಸಿ.ಎಸ್.ಆರ್. ಹೆಡ್ ಆದ ಮದುಸೂದನ ಸರ್, ಉಪನ್ಯಾಸಕರಾಗಿ ಆಗಮಿಸಿದ ಬಾಬು ಜೇರಿ ಜಿ.ಟಿ.ಟಿ.ಸಿ. ದಾಂಡೇಲಿ,ಸಂತೋಷ ಮೇತ್ರಿ ಡಿ.ವೈ.ಆರ್.ಎಫ್.ಓ, ನಾಗೋಡಾ, ಹಾಗೂ ಗಸ್ತು ಅರಣ್ಯ ಪಾಲಕರಾದ ದಿಲೀಪ ಕುಮಾರ ಬೆಳ್ಳಣ್ಣವರ ಸರ್,ತಾಲೂಕಾ ವೃತ್ತಿ ಮಾರ್ಗದರ್ಶಕರಾದ ಕಿರಣ ಉದ್ದಂಡಿ ಮತ್ತು ಸಂತೋಷ ಕಂಬಿ ಸರ್ ಜಿ.ಟಿ.ಟಿ.ಸಿ. ದಾಂಡೇಲಿ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಆಗಮಿಸಿದ ಸರ್ವರನ್ನು ವಿದ್ಯಾರ್ಥಿನಿಯರು ಸ್ವಾಗತಗೀತೆಯ ಮೂಲಕ ಸ್ವಾಗತಿಸಿ, ಸಹ ಶಿಕ್ಷಕಿಯಾದ ಕವಿತಾ ಕುಂಬಾರಕರ ಮೇಡಂರವರು ಸ್ವಾಗತಿಸಿದರು. ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ಚಲವಾದಿ ಸರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ, ರೂಪರೇಷೆಗಳ ಕುರಿತು ಮಾತನಾಡಿದರು. ದೇಶಪಾಂಡೆ ರುಡ್ ಸೆಟ್ ನ ಸಿ.ಎಸ್.ಆರ್. ಹೆಡ್ ಆದ ಮದುಸೂದನ್ ಸರ್ ರವರು ಮಾತನಾಡಿ, ಜೀವನದ ಮೌಲ್ಯಗಳು ಹಾಗೂ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಹೇಳಿದರು. ಉಪನ್ಯಾಸಕರಾಗಿ ಆಗಮಿಸಿದ ಬಾಬು ಜೇರಿ ಜಿ.ಟಿ.ಟಿ.ಸಿ. ದಾಂಡೇಲಿರವರು ಮಾತನಾಡಿ, ಭವಿಷ್ಯದಲ್ಲಿ ಗುರಿ ನಿಶ್ಚಯ ಮತ್ತು ಗುರುವಿನ ಮಾರ್ಗದರ್ಶನದಿಂದ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.ಸಂತೋಷ ಮೇತ್ರಿ ಡಿ.ವೈ.ಆರ್.ಎಫ್.ಓ, ನಾಗೋಡಾರವರು ಮಾತನಾಡಿ ಸರಿಯಾದ ಮಾರ್ಗದಲ್ಲಿ ಪರೀಕ್ಷೆಯ ತಯಾರಿಯನ್ನು ಮಾಡಿದರೆ ಯಾವುದೇ ಹುದ್ದೆಯನ್ನು ಬೇಕಾದರೂ ಗಳಿಸುವ ಸಾಮರ್ಥ್ಯವನ್ನು ಹೊಂದಬಹುದಾಗಿದೆ ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು. ಗಸ್ತು ಅರಣ್ಯ ಪಾಲಕರಾದ ದಿಲೀಪ್ ಕುಮಾರ ಬೆಳ್ಳಣ್ಣವರ ಸರ್ ರವರು ಮಾತನಾಡಿ, ಬಡತನ ಮತ್ತು ಬೇರೆ ಯಾವುದೇ ಸಮಸ್ಯೆಗಳು ಶಿಕ್ಷಣ ಮತ್ತು ವೃತ್ತಿಯ ಆಯ್ಕೆಯ ಮೇಲೆ ಪರಿಣಾಮ ಬೀರದಂತೆ ಕಾಳಜಿ ವಹಿಸಿ ನಾವು ಉತ್ತಮ ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣವನ್ನು ಪಡೆಯಲು ಸರ್ಕಾರದಿಂದ ಇರುವ ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಂಡು ನಮ್ಮ ಜೀವನದ ಗುರಿಯನ್ನು ಸಾಧಿಸಬೇಕಾಗಿದೆ ಎಂದು ತಿಳಿಸಿದರು. ತಾಲೂಕಾ ವೃತ್ತಿ ಮಾರ್ಗದರ್ಶಕರಾದ ಕಿರಣ ಉದ್ದಂಡಿ ಇವರು ಮಾತನಾಡಿ ವೃತ್ತಿ ಮಾರ್ಗದರ್ಶನದ ಆಶಯಗಳು ಮತ್ತು ಪರಿಣಾಮಗಳ ಕುರಿತು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮೋಹನ ಮಾವಸ್ಕರ ರವರು ವಹಿಸಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಉತ್ತಮ ನಾಗರಿಕರನ್ನು ರೂಪಿಸಲು ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ವಿಜ್ಞಾನ ಶಿಕ್ಷಕರಾದ ಕುಮಾರ ಭಗವಾನ ಸಿಂಧೆ ಸರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಇಂಗ್ಲೀಷ್ ಶಿಕ್ಷಕಿಯಾದ ಸಲ್ಮಾ ಮೇಡಂರವರು ವಂದಿಸಿದರು.ಇನ್ನಿತರ ಸಹ ಶಿಕ್ಷಕರು ಸಹಕಾರ ನೀಡಿದರು.
