ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಆದೇಶದಂತೆ ಯುಗಾದಿ ಪಾಢ್ಯದಿಂದ ರಾಮನವಮಿಯವರೆಗೆ 9 ದಿನಗಳ ಕಾಲ ನದಿ ತಿರುವು ಯೋಜನೆ ವಿರೋಧಿಸಿ ಎಲ್ಲ ದೇವಸ್ಥಾನಗಳಲ್ಲಿ ಪ್ರತಿದಿನ ಸಂಜೆ 4 ರಿಂದ 6 ಗಂಟೆಯ ವರೆಗೆ ಭಜನಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಶ್ರೀಗಳ ಆದೇಶದಂತೆಯೇ ಅಂಕೋಲಾ ತಾಲೂಕಿನ ಕೊಡ್ಲಗದ್ಧೆಯ ಗ್ರಾಮದೇವರಾದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿಯೂ ನದಿ ತಿರುವು ಯೋಜನೆ ವಿರೋಧಿಸಿ ಕುಳಿನಾಡು ಮತ್ತು ಚಿನ್ನಾಪುರ ಸೀಮಾ ಮಾತೃ ಮಂಡಳಿಯ ನೇತೃತ್ವದಲ್ಲಿ ಭಜನಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಯುಗಾದಿ ಪಾಢ್ಯದಿಂದ ಆರಂಭಗೊಂಡ ಈ ಅಭಿಯಾನ ಶ್ರೀರಾಮ ನವಮಿಯಂದು ಸಂಪನ್ನಗೊಡಿತು.

ಈ ಭಜನಾ ಜಾಗೃತಿ ಅಭಿಯಾನದಲ್ಲಿ ಕುಳಿನಾಡು ಮತ್ತು ಚಿನ್ನಾಪುರ ಸೀಮಾ ಮಾತೃ ಮಂಡಳಿಯ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ಲಕ್ಷ್ಮೀ ನರಸಿಂಹ ದೇವರ ಸನ್ನಿಧಾನದಲ್ಲಿ ಭಜನಾ ಸೇವೆ ಸಲ್ಲಿಸಿದರು. ಶ್ರೀ ರಾಮನವಮಿಯಂದು ಪ್ರಾರ್ಥನೆ, ಭಜನೆ, ಲಲಿತಾ ಸಹಸ್ರನಾಮ ಪಾರಾಯಣ, ಮತ್ತು ಆರತಿ ಪದದೊಂದಿಗೆ ಭಜನಾ ಅಭಿಯಾನ ಯಶಸ್ವಿಯಾಗಿ ಸಂಪನ್ನಗೊಂಡಿತು.