ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಕಾಲೋನಿಯ ಸಾರ್ವಜನಿಕ ಗಜಾನನೋತ್ಸವ ಸಭಾಭವನದಲ್ಲಿ ಜನವರಿ 24 ರಂದು ಶನಿವಾರ ಸಂಜೆ “ಮಾಗೋಡು ಆಲೆಮನೆ ಹಬ್ಬ-2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸುಂದರ ಪ್ರಕೃತಿಯ ಮಡಿಲಲ್ಲಿ ಮೋಹಕ ವಿದ್ಯುತ್ ದೀಪಗಳ ಅಡಿಯಲ್ಲಿ ಸನ್ಮಿತ್ರರ ಸಮಾಗಮದಲ್ಲಿ ಸಿಹಿಯಾದ ಕಬ್ಬಿನ ಹಾಲನ್ನು ಸವಿಯುತ್ತಾ ಸವಿ ಸವಿ ತಿಂಡಿಗಳನ್ನು ಸ್ವೀಕರಿಸಿ, ಮಾರಾಟ ಮಳಿಗೆಯಲ್ಲಿ ಮನೆಯವರಿಗಾಗಿ ಕಬ್ಬಿನ ಹಾಲು, ತೊಡೆದೇವು ಮುಂತಾದ ವಿವಿಧ ಕಬ್ಬಿನೋತ್ಪನ್ನಗಳನ್ನು ಖರೀದಿಸಿ ಸುಂದರ ಸಂಜೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಾಗೋಡು ಆಲೆಮನೆ ಹಬ್ಬ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ.

ಆಲೆಮನೆ ಹಬ್ಬದ ಪ್ರಯುಕ್ತ ಶನಿವಾರ ಸಂಜೆ 5 ಗಂಟೆಗೆ ಗೋವರ್ಧನ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದೆ. ಮಧ್ಯಾನ್ಹ 4 ಗಂಟೆಗೆ ಶ್ರೀ ವೀರ ಮಾರುತಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಸಂಜೆ 5 ಗಂಟೆಗೆ ಗೋವರ್ಧನ ವೇದಿಕೆಗೆ ಬಂದು ತಲುಪಲಿದೆ. ಸಂಜೆ 5 ರಿಂದ 5.25 ಭಗವಧ್ಗೀತೆ, ರಾಷ್ಟ್ರಗೀತೆ, ವಂದೇ ಮಾತರಂ, 5.30 ರಿಂದ 6.15 ರವರೆಗೆ ಭಕ್ತಿ ಸಂಗೀತ, ನಂತರ ರಾತ್ರಿ 11 ಗಂಟೆಯವರೆಗೆ ನಿರಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.