ಸುದ್ಧಿಕನ್ನಡ ವಾರ್ತೆ
. ಜೋಯಿಡಾ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ, ಕುಂಬಾರವಾಡಾ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕಿರವತ್ತಿ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಕುಂಬಾರವಾಡಾ ಕ್ಲಸ್ಟರ್ ಮಟ್ಟದ  FLN ಕಲಿಕಾ ಹಬ್ಬ 13 ಜನವರಿ 2026 ರ, ಮಂಗಳವಾರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕಿರವತ್ತಿ ಶಾಲೆಯಲ್ಲಿ FLN ಕಲಿಕಾ ಹಬ್ಬ ಯಶಸ್ವಿ ಸಂಪನ್ನ ಗೊಂಡಿತು.

FLN  ಕಲಿಕಾ ಹಬ್ಬವನ್ನು ಕಾತೇಲಿ (ಕುಂಬಾರವಾಡಾ) ಗ್ರಾಮ ಪಂಚಾಯತ ಅಧ್ಯಕ್ಷರಾದ ಚೆನ್ನಮ್ಮ ಡೊಂಬರ ಉದ್ಘಾಟಿಸಿ ಮಾತನಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಿಕಾ ಹಬ್ಬದ ಕಾರ್ಯಕ್ರಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿ ಎಂದರು. ಮುಖ್ಯ ಅತಿಥಿಗಳಾದ ಆಗಮಿಸಿದ್ದ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಪ್ರವೀಣ ನಾಯ್ಕ ಮಾತನಾಡಿ ಇಲಾಖೆಯ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಹಕರಿಸುವುದಾಗಿ ಹೇಳಿದರು. ಬಿ ಆರ್ ಪಿ ಗಳಾದ ಶಶಿಕಾಂತ ಹೂಲಿ,ಹಿರಿಯ ಶಿಕ್ಷಕರಾದ ಶ್ರೀಕಾಂತ ನಾಯ್ಕ ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.

ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಗಾಂವ್ಕರ ಎಫ್ ಎಲ್ ಎನ್ ಕಲಿಕಾ ಹಬ್ಬದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಒಟ್ಟು 7 ಸ್ಪರ್ಧೆಗಳಲ್ಲಿ ಕ್ಲಸ್ಟರಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದರು. ಸಮಾರೋಪ ಸಮಾರಂಭದಲ್ಲಿ ತಾಲೂಕಾ ಶಿಕ್ಷಣ ಸಂಯೋಜಕರಾದ ಪರಮೇಶ್ವರ ಹರಿಕಾಂತ ಭಾಗವಹಿಸಿ ಬಹುಮಾನ ವಿತರಿಸಿದರು.

ಕಿರವತ್ತಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ವೆಂಕಟೇಶ ಡೇರೆಕರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಶುಚಿ-ರುಚಿಯಾದ ಊಟದ ವ್ಯವಸ್ಥೆಯನ್ನು ಕಿರವತ್ತಿ ಶಾಲೆಯ ಶಿಕ್ಷಕರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಉಪಾಧ್ಯಕ್ಷರು, ಸರ್ವ ಸದಸ್ಯರು,ಪಾಲಕರ,ಪೋಷಕರ ಸಹಕಾರದಲ್ಲಿ ಮಾಡಿದ್ದರು. ಕುಂಬಾರವಾಡಾ ಕ್ಲಸ್ಟರಿನ ಶಾಲೆಯ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ವಿದ್ಯಾರ್ಥಿಗಳು ಯಶಸ್ವಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಿರವತ್ತಿ ಶಾಲೆಯ ಮುಖ್ಯ ಶಿಕ್ಷಕಿಯಾದ ಸರಿತಾ ಶಿರ್ವಾದಕರ ಸ್ವಾಗತಿಸಿದರೆ,ಸಹ ಶಿಕ್ಷಕಿಯಾದ ಜ್ಯೋತಿ ಕಾರ್ಯಕ್ರಮದ ನಿರೂಪಣೆ ಮಾಡಿ ವಂದಿಸಿದರು.