ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಕಬ್ಬಿನಹಾಲು ಹಾಗೂ ಕಬ್ಬಿನ ಹಾಲಿನಿಂದ ಸಿದ್ಧಪಡಿಸುವ ವಿಶೇಷ ಸಿಹಿ ತಿಂಡಿಗಳನ್ನು ಸವಿಯಲು ಸಿದ್ಧರಾಗಿ…ಇದೋ ಇಲ್ಲಿದೆ ನಿಮಗೆ ಆಮಂತ್ರಣ….
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ದೇಹಳ್ಳಿಯಲ್ಲಿ ಜನವರಿ 21 ರಂದು ಬುಧವಾರ ಸಂಜೆ 5 ಗಂಟೆಯಿಂದ ಆಲೆಮನೆ ಹಬ್ಬ ಆಯೋಜಿಸಲಾಗಿದೆ.
ನಾವು ನಮ್ಮವರು ಬಳಗ ಆಲೆಮನೆ ಹಬ್ಬ ಆಯೋಜಿಸಿದ್ದು, ಸತತ 6 ನೇಯ ವರ್ಷದ ಕಾರ್ಯಕ್ರಮ ಇದಾಗಿದೆ. ದೇಹಳ್ಳಿ ಶಾಲಾ ಆವರಣದ ಪಕ್ಕದಲ್ಲಿ ಜನವರಿ 21 ರಂದು ಸಂಜೆ 5 ಗಂಟೆಯಿಂದ ಈ ಕಾರ್ಯಕ್ರಮ ನಡೆಯಲಿದೆ.
ದೇಹಳ್ಳಿ ಆಲೆಮನೆ ಹಬ್ಬದಲ್ಲಿ ಉಚಿತ ಕಬ್ಬಿನ ಹಾಲು ಹಾಗೂ ಕಬ್ಬಿನ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ಸವಿಯಲು ಬನ್ನಿ. ಸರ್ವರನ್ನೂ ನಾವು ನಮ್ಮವರು ಬಳಗ ಈ ಮೂಲಕ ಹಾರ್ದಿಕ ಸ್ವಾಗತ ಕೋರಿದೆ.
