ಸುದ್ಧಿಕನ್ನಡ ವಾರ್ತೆ
ಶಿರಸಿ: ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 24 ರಿಂದ ಮಾರ್ಚ 4ರ ವರೆಗೆ ನಡೆಯಲಿದೆ.
ಶ್ರೀ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ನಡೆದ ಸಭೆಯಲ್ಲಿ ದೇವಸ್ಥಾನದ ಪುರೋಹಿತರಾದ ಶರಣ್ ಆಚಾರ್ಯ, ಕೆರೇಕೈ ರಾಮಕೃಷ್ಣ ಭಟ್ಟ ಅವರು ಜಾತ್ರೇಯ ದಿನಾಂಕ ಪ್ರಕಟಿಸಿದ್ದಾರೆ.
ಫೆಬ್ರವರಿ 24 ರಂದು ದೇವಿಯ ರಥದ ಕಲಶಾರೋಹಣ, ಕಲ್ಯಾಣ ಪ್ರತಿಷ್ಠೆ, 25ರಂದು ರಥೋತ್ಸವ, 26ರಿಂದ ಸೇವೆಗಳು ಪ್ರಾರಂಭವಾಗಲಿವೆ.
ಮುಹೂರ್ತ ನಿಗದಿ ಸಭೆಯಲ್ಲಿ ಶಾಸಕ ಭೀಮಣ್ಣ ಟಿ ನಾಯ್ಕ, ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಬಾಬುದಾರ ಪ್ರಮುಖ ಜಗದೀಶ ಗೌಡ, ಡಿಎಸ್ ಪಿ ಗೀತಾ ಪಾಟೀಲ, ಎಸಿ ಕಾವ್ಯಾರಾಣಿ, ಧರ್ಮದರ್ಶಿಗಳಾದ ಸುದೀರ ಹಂದ್ರಾಳ, ಎಸ್ ಪಿ ಶೆಟ್ಟಿ, ವತ್ಸಲಾ ಹೆಗಡೆ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ಇತರರು ಉಪಸ್ಥಿತರಿದ್ದರು.
ಜಾತ್ರೆಯ ವಿಶೇಷ; ಶಿರಸಿಯ ಮಾರಿಕಾಂಬಾ ಜಾತ್ರೆಗೆ ಕರ್ನಾಟಕದ ಮೂಲೆ ಮೂಲೆಯಿಂದ ಮಾತ್ರವಲ್ಲದೆಯೇ ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಲಿದ್ದಾರೆ.
