ಸುದ್ಧಿಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ಅನಮೋಡ ಗ್ರಾಮ ಪಂಚಾಯತ ವ್ಯಾಪ್ತಿಯ  ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ  ವಟಲಾ ಶಾಲೆಯ ಶಿಕ್ಷಕರಾದ ಶ್ರೀ ಸತ್ಯಪ್ಪಾ ಭೀಮಪ್ಪಾ ತೋಟಗಿ ಸೇವಾ ನಿವೃತ್ತಿಯಾದರು.

ಸೇವಾ ನಿವೃತ್ತಿಯ ನಿಮಿತ್ತ  ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ವಟಲಾ,ಗೌಡಸಾಡ/ಅನಮೋಡ ಕ್ಲಸ್ಟರಿನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ವತಿಯಿಂದ,ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌಡ ಸಾಡ/ಅನಮೋಡ ಶಾಲೆಯ ಮುಖ್ಯ ಶಿಕ್ಷಕರಾದ ವಾಯ್.ಕೆ.ನಾಟೇಕರ ವೇದಿಕೆಗೆ ಗಣ್ಯರನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಶುಭಾರಂಭವನ್ನು  ಶಾಲೆಯ ವಿಧ್ಯಾರ್ಥಿನಿ ಸ್ನೇಹಾ ಅತಲೇಕರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ನಂತರ ಗುರುಬ್ರಹ್ಮ ಗುರುವಿಷ್ಣು ಗುರುದೇವ ಮಹೇಶ್ವರಃ ಗುರುಸಾಕ್ಷಾ ತ್ ಪರಬ್ರಹ್ಮ ತಸ್ಮ್ಯಶ್ರೀ ಗುರುವೇ ನಮಃ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ದೇವರ ಸಮಾನ ಎಂದು ಕೊಂಡಾಡಲಾಗಿದೆ. ಗೌಡಸಾಡ ಶಾಲೆಯ ವಿದ್ಯಾರ್ಥಿನಿಯರು ನೃತ್ಯದ ಮೂಲಕ ಗುರುಗಳಿಗೆ ನಮನ ಸಲ್ಲಿಸಿದರು.

ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಮಾತನಾಡಿ ಇಲಾಖೆಯ ನಿಯಮಾವಳಿಯಂತೆ ಸಹ ಶಿಕ್ಷಕರಾದ ಸತ್ಯಪ್ಪಾ ಭೀಮಪ್ಪಾ ತೋಟಗಿಯವರು ತಮ್ಮ ಸೇವಾವಧಿಯಲ್ಲಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿಯಾಗುತ್ತಿದ್ದು ಅವರ ಮುಂದಿನ ಜೀವನ ಸುಖಕರವಾಗಲಿ ಎಂದು ತಾಲೂಕಾ ಶಿಕ್ಷಕರ ಸಂಘದ ಪರವಾಗಿ ಶುಭ ಕೋರಿದರು.                      ತಾಲೂಕಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹಾದೇವ ಹಳದನಕರ ಮಾತನಾಡುತ್ತಾ ಜೋಯಿಡಾ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾಗುತ್ತಿರುವ ಸತ್ಯಪ್ಪಾ ಭೀಮಪ್ಪಾ ತೋಟಗಿಯವರ ನಿವೃತ್ತಿ ಜೀವನ ಉತ್ತಮ ವಾಗಿರಲಿ ಎಂದು ಹೇಳಿದರು.

ಶಿಕ್ಷಕ ಗುರುಪ್ರಸಾದರವರು ತೋಟಗಿ ಗುರುಗಳ ಸರಳತೆ ಎಲ್ಲರೊಂದಿಗೆ ಬೆರೆಯುವ ಅವರ ಗುಣವನ್ನು ಕೊಂಡಾಡಿದರು .ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್,ಸಂತೋಷ ಸಾಳುಂಕೆ ಪತ್ರಾಂಕಿತ ವ್ಯವಸ್ಥಾಪಕರು,ಪರಮೇಶ್ವರ ಹರಿಕಾಂತ,ಶಶಿಕಾಂತ ಹೂಲಿ,ಶಶಿಕಾಂತ್ ಕಾಂಬ್ಳೆ, ಗಣೇಶ ಗಾಂವಕರ ಎಸ್.ಡಿ.ಎಂ. ಸಿ ಅಧ್ಯಕ್ಷರು,ಪಾರ್ವತಿ ಮಹಾದೇವ ಗಾವಡೆ ಅಖೇತಿ ಗ್ರಾಮ ಪಂಚಾಯತ ಅಧ್ಯಕ್ಷರು,ಶ್ರೀನಾಥ ಮಳಿಕ ಗ್ರಾಮ ಪಂಚಾಯತ ಸದಸ್ಯರು,ಮಹಾದೇವ ಗಾವಡೆ ಊರಿನ ಪ್ರಮುಖರು,ಸಂಜನಾ ಅತಲೇಕರ ಉಪಾಧ್ಯಕ್ಷರು ಎಸ್.ಡಿ.ಎಂ.ಸಿ,ವಿಲಾಸ ಗಾಂವಕರ ಮಾಜಿ ಗ್ರಾಮ ಪಂಚಾಯತ ಸದಸ್ಯರು, ವಿಜಯ ರಾಜಾರಾಮ ನಾಯ್ಕ, ಶಿಕ್ಷಕರಾದ ಗುರುನಾಥ ಲಮಾಣಿ, ಅನಿಲ ರಾಠೋಡ, ವಿನಾಯಕ ಹೆಗಡೆ,ರೋಸಾಯಿ ರೆಡ್ಡಿಪೊಗೋ, ರಾಜಾ ಲಮಾಣಿ,ರಘು ಪಟಗಾರ, ಬಸನಗೌಡ ಪಾಟೀಲ,ರಶ್ಮಿ ಆಚಾರ್ಯ ಶಿಕ್ಷಕರಾದ ಸತ್ಯಪ್ಪಾ ಭೀಮಪ್ಪಾ ತೋಟಗಿಯವರ ಸೇವಾ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು.

ಶಾಲಾ ಎಸ್. ಡಿ .ಎಂ.ಸಿ ಪದಾಧಿಕಾರಿಗಳು,ಶಿಕ್ಷಕ ವೃಂದದವರು,ಗ್ರಾಮದ ಪ್ರಮುಖರು, ಪಾಲಕರು, ಪೋಷಕರು,ಹಳೆಯ ವಿದ್ಯಾರ್ಥಿಗಳು ಶಿಕ್ಷಕ ಸತ್ಯಪ್ಪಾ ಭೀಮಪ್ಪಾ ತೋಟಗಿ ದಂಪತಿಯವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.     ಈ  ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರು,ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಶವಂತ ನಾಯ್ಕ ಅವರು ಕರ್ನಾಟಕ ರಾಜ್ಯದ ಪ್ರಾಥಮಿಕ  ಶಿಕ್ಷಕರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಕ್ಕೆ ಅನಮೋಡ ಕ್ಲಸ್ಟರಿನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸ್ಮರಣಿಕೆಯನ್ನು ನೀಡಿ ಗೌರವಿಸಿ,ಸನ್ಮಾನಿಸಿದರು.

ಶಾಲೆಯ ಸಹ ಶಿಕ್ಷಕಿಯರಾದ ಪ್ರತಿಭಾ ಗೌಡ ನಿರೂಪಿಸಿದರು, ಕಾವ್ಯ ಮಡಿವಾಳ ವಂದಿಸಿದರು.