ಸುದ್ಧಿಕನ್ನಡ ವಾರ್ತೆ
ಜೊಯಿಡಾ: ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಎಂದರೆ, ತುಂಬಾ ಹಿಂದುಳಿದ ಪ್ರದೇಶ, ಇಲ್ಲಿ ಶಾಲೆ ಕಾಲೇಜು ಗಳಿಗೆ ಹೋಗಲು ಹರ ಸಾಹಸವನ್ನೇ ಮಾಡಬೇಕು, ಸ್ಥಳೀಯರಿಗೆ, ಇಲ್ಲಿನ ಪರಿಸ್ಥಿತಿ ಗೊತ್ತಿರುತ್ತದೆ ಆದರೆ, ಹೊರಜಿಲ್ಲೆಯಿಂದ, ಹೊಸದಾಗಿ ಆಯ್ಕೆ ಆದವರು ತಾಲೂಕನ್ನು ಪ್ರವೇಶಿಸುತ್ತಿದ್ದಂತೆ ಗರ ಬಡಿದವರಂತೆ ಹೆದರಿ ಬಿಡುತ್ತಾರೆ, ಸಾಕಷ್ಟು ಶಿಕ್ಷಕರು, ಇಲ್ಲಿ ಬಂದು ನೋಡಿದವರು ಅನೇಕರು ಮತ್ತೆ ಇತ್ತ ಬರಲೇ ಇಲ್ಲ, ಅಂತ ಪರಿಸ್ಥಿತಿಯಲ್ಲಿ, ಅನೇಕ ಶಿಕ್ಷಕರು ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತಾ, ತಮ್ಮ ಸೇವೆ ನೀಡಿದ್ದಾರೆ, ಮಳೆ ಗಾಲ ಎಂದರೆ, ಹಳ್ಳ ಕೊಳ್ಳ ದಾಟುವ ಕಷ್ಟ, ವಿದ್ಯುತ್ ಸಮಸ್ಯೆ, ತಮ್ಮ ಸಂಸಾರ ಒಂದು ಕಡೆ, ತಾವೊಂದು ಕಡೆ ಆದರೂ, ಸರಕಾರದ ಕೆಲಸ ದೇವರ ಕೆಲಸ ಎಂದು ಸೇವೆ ಸಲ್ಲಿಸಿ, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಕೊಂಡಿದ್ಫು, ತಾಲೂಕಿನ ಜನತೆ ಅವರನ್ನು ಅಭಿನಂದಿಸಿರುತ್ತಾರೆ.
ಇಂತಹ ಪರಿಸ್ಥಿತಿಗೂ ಹೆದರದೆಯೇ ತಮ್ಮ ಕರ್ತವ್ಯವವನ್ನು ನಿಷ್ಠೆಯಿಂದ ಮಾಡುತ್ತ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಹಲವು ಶಿಕ್ಷಕರಿದ್ದಾರೆ. ಈ ಪೈಕಿ ಈ ವರ್ಷದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ರಾಗಿ ಜೋಯಿಡಾ ತಾಲೂಕಿನ ಮೂವರು ಶಿಕ್ಷಕರು ಆಯ್ಕೆ ಯಾಗಿದ್ದಾರೆ, ಕಿರಿಯ ಪ್ರಾಥಮಿಕ ಶಾಲೆ ಕ್ಯಾಸಲ್ ರಾಕ್ ದಿಂದ,ಮುತ್ತಪ್ಪ ವಠಾರ, ಆಯ್ಕೆ ಆಗಿದ್ದು, ಶ್ರೀಕಾಂತ್ ನಾಯ್ಕ್, ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ಮಾವಲಿಂಗ, ಮತ್ತು ಪ್ರೌಢ ಶಾಲೆಯ ವಿಭಾಗದಿಂದ ಬಾಪೇಲಿ ಪ್ರೌಢ ಶಾಲೆಯ ಸಹ ಶಿಕ್ಷಕ ಶಿವಾನಂದ ಕೆ ಹೆಚ್, ಆಯ್ಕೆ ಯಾಗಿದ್ದಾರೆ ಎಂದು ಜೋಯಿಡಾ ಶಿಕ್ಷಣ ಇಲಾಖೆ ತಿಳಿಸಿದೆ.