ಸುದ್ಧಿಕನ್ನಡ ವಾರ್ತೆ
ಆಡಳಿತ ಸುಧಾರಣೆ ಅಧ್ಯಕ್ಷರು ಹಾಗೂ ಶಾಸಕರು ಆದ ಆರ್ ವಿ ದೇಶಪಾಂಡೆ ಅವರು ಸೋಮವಾರ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಗಣೇಶ ಗುಡಿಯಲ್ಲಿರುವ ಸುಪಾ ಜಲಾಶಯಕ್ಕೆ ಬಂದು ಜಲಾಶಯ ತುಂಬಿರುವ ಕಾರಣ ಭಾಗಿನ ಅರ್ಪಿಸಿದರು.

 

ಜಲಾಶಯದ ಗರಿಷ್ಠ ಮಟ್ಟ 564 ಮೀಟರ್ ಇದ್ದು ಜಲಾಶಯದ ಇಂದಿನನೀರಿನ ಮಟ್ಟ 559.5 ಮೀಟರ್ ಗಳಾಗಿವೆ ಎಂದು, ಕೆ ಪಿ ಸಿ ಮುಖ್ಯ ಅಭಿಯಂತರರು, ತಿಳಿಸಿದರು. ಭಾಗಿನ ಅರ್ಪಿಸಿದ ಶಾಸಕರು ಸುದ್ಧಿಗಾರರೊಂದಿಗೆ ಮಾತನಾಡಿ- ಇದು ತುಂಬಾ ಸಂತಸದ ಸಮಯ, ಸಾಕಷ್ಟು ನೀರು ಸಂಗ್ರಹ ದಿಂದ, ಎಲ್ಲರಿಗೂ ಅನುಕೂಲ ವಾಗಿದೆ. ವಿದ್ಯುತ್ ಬಳಕೆ ದಾರರು, ಕಾರ್ಖಾನೆ ನಡೆಸುವವರು, ಇನ್ನಿತರ ಅಭಿವೃದ್ಧಿ ಗಳಿಗೆ ವಿದ್ಯುತ್ ಬೇಕೇಬೇಕು, ಹಾಗಾಗಿ, ಜಲಾಶಯ ತುಂಬಿರುವುದು ಸಂತಸ ತಂದಿದೆ, ನಾಡಿನ ಜನತೆ ನೆಮ್ಮದಿಯಿಂದ ಬದುಕುವುದೇ ನಮ್ಮ ಆಶಯ ಎಂದರು. ಶಾಸಕರು, ಸುಪಾ ಜಲಾಶಯ ತುಂಬಿ ದಾಗಲೆಲ್ಲ, ಗೌರವ ನೀಡಿ ಭಾಗಿನ ಅರ್ಪಿಸುತ್ತಾ ಬಂದಿರುತ್ತಾರೆ.

 


Administrative Reforms President and MLA RV Deshpande on Monday came to the Supa reservoir in Ganesh Gudi of Zoida taluk of Uttara Kannada district and offered bhagi as the reservoir was full.