ಸುದ್ಧಿಕನ್ನಡ ವಾರ್ತೆ
ಜೋಯಿಡಾ ತಾಲ್ಲೂಕಿನ ನಂದಿಗದ್ದೆ ಗ್ರಾಮದಲ್ಲಿ 49 ನೇ ವರ್ಷದ ಗಜಾನನೋತ್ಸವದ ಪ್ರಯುಕ್ತ 3 ನೇ ದಿನವಾದ ಶುಕ್ರವಾರದಂದು ಗಣಪತಿಯ ಸನ್ನಿಧಾನದಲ್ಲಿ ಗಣಹವನ , ಸತ್ಯ ಗಣಪತಿ ಪೂಜೆ, ಅಥರ್ವಶೀರ್ಷ ಪಾರಾಯಣ ಪೂಜಾ ಕಾರ್ಯಕ್ರಮಗಳು ವೇದಮೂರ್ತಿ ಪ್ರಸನ್ ಭಟ್ ಮತ್ತು ವೇದಮೂರ್ತಿ ಹರಿಹರ ಭಟ್ಟ ಇವರ ನೇತೃತ್ವದಲ್ಲಿ ನಡೆಯಿತು.
ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಯಿತು. ಸಂಜೆ 6 ಗಂಟೆಯಿಂದ ಮಹಾಗಣಪತಿ ಭಜನಾ ಮಂಡಳಿ ಗುಂದ ಇವರಿಂದ ಭಜನಾ ಕಾರ್ಯಕ್ರಮವು ನೆರವೇರಿತು. ನಂತರ ನಂದಿಗದ್ದೆ ಯುವಕ ಮಂಡಳದಿಂದ ಭಜನಾ ಕಾರ್ಯಕ್ರಮವು ನಡೆಯಿತು. ರಾತ್ರಿ 8-30 ಕ್ಕೆ ಪೂಜೆ, ಪ್ರಸಾದ ವಿತರಣೆಯನ್ನು ಮಾಡಲಾಯಿತು. 9 – 00 ಗಂಟೆಗೆ ಸಭಾ ಕಾರ್ಯಕ್ರಮವನ್ನು , ಗೌರವ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಭೆಯನ್ನು ನಂದಿಗದ್ದಾ ಸೇವಾ ಸಹಕಾರಿ ಸಂಘ ಯರಮುಖದ ಅಧ್ಯಕ್ಷರಾದ ಶ್ರೀ ಆರ್ ವಿ ದಾನಗೇರಿ ಇವರು ಉದ್ಘಾಟಿಸಿದರು. ಗುಂದ ಸೀಮಾ ಪರಿಷತ್ತಿನ ಅಧ್ಯಕ್ಷರಾದ ದತ್ತಾತ್ರೇಯ ಟಿ ಹೆಗಡೆ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಸೋಮೇಶ್ವರ ದೇವಸ್ಥಾನ ಯರಮುಖದ ಅಧ್ಯಕ್ಷರಾದ ಶ್ರೀ ಮಂಜುನಾಥ ಎಂ ಭಾಗ್ವತ್ , ಗುತ್ತಿಗೆದಾರರಾದಂತಹ ಶ್ರೀ ಆರ್, ಎ ಭಟ್ ಕರಿಯಾದಿ,ಸಾಮಾಜಿಕ ಕಾರ್ಯಕರ್ತರಾದಂತಹ ಶ್ರೀ ಸದಾನಂದ ಎಂ ಉಪಾಧ್ಯ,ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಉಪಾಧ್ಯಕ್ಷರಾದ0ತಹ ಶ್ರೀ ದಯಾನಂದ ದಾನಗೇರಿ ಇವರು ಉಪಸ್ಥಿತರಿದ್ದರು.ನಂತರ ಈ ವರ್ಷದ ಉತ್ಸವದಲ್ಲಿ ಹಿರಿಯರು, ಕೃಷಿಕರು ಆದಂತಹ ಶ್ರೀಮತಿ ಪಾರ್ವತಿ ಮತ್ತು ಶ್ರೀ ಶ್ರೀರಂಗ ಶಿವರಾಮ ದಾನಗೇರಿ, ನಿವೃತ್ತ ಶಿಕ್ಷಕರಾದಂತಹ ಶ್ರೀ ಜನಾರ್ಧನ ವಿ ಹೆಗಡೆ, ನಾಟಿ ವೈದ್ಯರಾದಂತಹ ಶ್ರೀಮತಿ ಲಕ್ಷ್ಮಿ ಮತ್ತು ಶ್ರೀ ಗಣೇಶ ಕುಷ್ಠ ಸಾವರಕರ ಇವರಿಗೆ ಸನ್ಮಾನವನ್ನು ಮಾಡಲಾಯಿತು. ನಂತರ ದೇವರ ಫಲಾವಳಿಗಳ ಸವಾಲನ್ನು ಮಾಡಲಾಯಿತು.
ತದನಂತರ ಸುದರ್ಶನ್ ಎಸ್ ಹೆಗಡೆ ಫೆÇೀಟೋಲಿ ಇವರ ಸಾರಥ್ಯದಲ್ಲಿ ಸಹ್ಯಾದ್ರಿ ಕಲಾ ಬಳಗದವರಿಂದ ಸುರೇಶ್ ಆರ್ ಕಂಬಳಿ ವಿರಚಿತ ಮರಳಿ ಬಂದ ಮುತ್ತೈದೆ ಎಂಬ ಸಾಮಾಜಿಕ ನಾಟಕ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳ ನಂತರ ಅತ್ಯಂತ ವಿಜ್ರಂಬಣೆಯಿಂದ ಮೆರವಣಿಗೆಯೊಂದಿಗೆ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.ಈ ಸಂದರ್ಭದಲ್ಲಿ ಗಜಾನನೋತ್ಸವ ಸಮಿತಿಯ ಅಧ್ಯಕ್ಷರು ಶ್ರೀ ಅಜಿತ್ ಆರ್ ಹೆಗಡೆ, ದಯಾನಂದ ದಾನಗೇರಿ, ಸುರೇಶ ಬಾಂದೇಕರ್, ಶಶಿಕಾಂತ ಎಸ್ ಹೆಗಡೆ, ಅನಂತ ಆರ್ ಭಟ್, ಸುಧಾಮ ಎಸ್ ದಾನಗೇರಿ ಮತ್ತು ಸಮಿತಿಯ ಎಲ್ಲ ಪದಾಧಿಕಾರಿಗಳು ಉತ್ಸಾಹಿ ಯುವಕರು , ಮಕ್ಕಳು ಉಪಸ್ಥಿತರಿದ್ದರು.
ಗ್ರಾಮಸ್ಥರ ಮತ್ತು ಭಕ್ತಾದಿಗಳ ನೆರವಿನಿಂದ ನಡೆದಂತಹ 49ನೇ ವರ್ಷದ ಗಜಾನನೋತ್ಸವದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು