ಸುದ್ಧಿಕನ್ನಡ ವಾರ್ತೆ
ಜೋಯಿಡಾ, ತಾಲೂಕಿನ ಪುಣ್ಯ ಕ್ಷೆತ್ರ ಗಳಲ್ಲಿ ಒಂದಾದ ಉಳವಿ ಯಲ್ಲಿ ಗ್ರಾಮಸ್ಥರೇ ಸ್ವಚ್ಛತಾ ಕಾರ್ಯ ಕೈಕೊಂಡಿದ್ದಾರೆ. ಗಣೇಶ ಚೌತಿ, ಈದ್ ಮಿಲಾದ ಹಬ್ಬಗಳು ಒಟ್ಟಿಗೆ ಬಂದಿವೆ, ಹಬ್ಬ ಗಳನ್ನು ತಾಲೂಕಿನಲ್ಲಿ, ಗೌಜು ಗಲಾಟೆ ಗಳಿಲ್ಲದೇ ಚನ್ನಾಗಿ ಆಚರಿಸುತ್ತಾರೆ. ಹೀಗಾಗಿ ಜೋಯಿಡಾ ತಾಲೂಕು ಒಂದು ಮಾದರಿ ತಾಲೂಕು ಆಗಿದೆ.
ಹಿಂದೂ,ಕ್ರಿಶ್ಚಿಯನ್ ಮತ್ತು ಮುಸ್ಲಿಂ ಬಾಂದವರು ಅಣ್ಣ ತಮ್ಮಂದಿರಂತೆ ಹಬ್ಬ ಹರಿದಿನ ಗಳನ್ನು ಭಕ್ತಿಯಿಂದ ಆಚರಿಸುತ್ತಾರೆ. ಇದು ಎಲ್ಲರ ಬಾವನೆ ಗಳಿಗೆ ಸಾಕ್ಷಿ ಯಾಗಿದೆ. ಹಾಗಾಗಿ ಈ ತಾಲೂಕಿನಲ್ಲಿ ಹೆಚ್ಚಾಗಿ ಯಾವುದೇ ಕಾನೂನು ಸಮಸ್ಯೆಗಳು ಬರುವುದಿಲ್ಲ. ಅದೇನೇ ಇದ್ದರೂ ಶ್ರೀ ಕ್ಷೆತ್ರ ಉಳವಿ ಚನ್ನಬಸವಣ್ಣ ನವರು ಬದುಕಿ ಬಾಳಿದ ಪುಣ್ಯ ಕ್ಷೆತ್ರ, ಇಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುವ ಕಾರಣ, ರಥಬೀದಿ ಸ್ವಚ್ಛ ವಾಗಿರಲಿ ಎಂದು, ಇಸ್ಮಾಯಿಲ್ ಮಿತ್ರ ಮಂಡಳಿ ಯವರು ಈದ್ ಮಿಲಾದ್, ಹಬ್ಬದ ನಿಮಿತ್ತ ಬೀದಿಯನ್ನು ಸ್ವಚ್ಛ ಗೊಳಿಸಿದರು.